ಬೀದಿ ನಾಯಿಗಳ ರಕ್ಷಣೆಗೆ ಈ ಮಂಗಳೂರಿನ ಯುವಕ ವಿಶೇಷ ಹೆಜ್ಜೆಯನ್ನಿಟ್ಟಿದ್ದಾರೆ. ಮಂಗಳೂರು ನಗರದ ತೌಸೀಫ್ ಅಹ್ಮದ್ ಕಳೆದ ಒಂದೂವರೆ ತಿಂಗಳಿಂದ ಬೀದಿ ನಾಯಿಗ ಕುತ್ತಿಗೆಗೆ ಪಟ್ಟಿಯೊಂದನ್ನು ಹಾಕುತ್ತಿದ್ದಾರೆ. ಸಾಧಾರಣವಾಗಿ ಬೀದಿ ನಾಯಿಗಳನ್ನು ಕೇಳುವವರಿಲ್ಲ, ವೇಗದೂತ ವಾಹನಗಳಡಿಗೆ ಬಿದ್ದು ಅವುಗಳು ದಾರುಣವಾಗಿ ಸಾವನ್ನಪ್ಪುತ್ತದೆ. ರಾತ್ರಿ ವೇಳೆ ಹೈವೇ ದಾಟುವಾಗ ಕೆಲವೊಮ್ಮೆ ಬಲಿಯಾಗುತ್ತದೆ… ಇವುಗಳನ್ನು ಮನಗಂಡ ತೌಸೀಫ್ ನಾಯಿಗಳ ಕಟ್ಟಿಗೆ ರೆಫ್ಲೆಕ್ಟಿಂಗ್ ಪಟ್ಟಿಯನ್ನು ಕಟ್ಟುತ್ತಿದ್ದಾರೆ. ಈತನ ಪ್ರಾಣಿ ದಯೆ ಮತ್ತು ಈ ಅಭಿಯಾನಕ್ಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಪ್ರಶಂಸೆ ವ್ಯಕ್ತವಾಗಿದೆ.

 

Leave a Reply