ಯಾಂಗೂನ್: ಜೈಲಿಗಟ್ಟಲಾದ ರಾಯಿಟರ್ಸ್ ಪತ್ರಕರ್ತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಬರ್ಮಾದಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿದೆ. ಪತ್ರಕರ್ತರ ಬಂಧನವನ್ನು ನೋಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಬರ್ಮದ ನಾಯಕಿ ಆಂಗ್ಸಾನ್ ಸೂಕಿ ಸಮರ್ಥಿಸಿಕೊಂಡಿದ್ದರು. ನಂತರ ಅಲ್ಲಿ ಪತ್ರಕರ್ತರನ್ನು ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಯುತ್ತಿದೆ.

ಸರಕಾರದ ಅಧಿಕೃತ ಪತ್ರಿಕೆಯನ್ನು ಸಾಂಕೇತಿಕವಾಗಿ ಪ್ರತಿಭಟನಾಕಾರರು ಪತ್ರಕರ್ತರಿಗೆ ಹೊಡೆದರು.ನೂರಕ್ಕೂ ಹೆಚ್ಚು ಯುವಕರು ಕಳೆದ ದಿವಸ ಬರ್ಮಾದ ಅತೀ ದೊಡ್ಡ ನಗರವಾದ ಯಾಂಗೋನ್‍ನಲ್ಲಿ ಪ್ರತಿಭಟನೆನಡೆಸಿದ್ದಾರೆ.

ರೋಹಿಂಗ್ಯನ್ ಮುಸ್ಲಿಮರ ವಿರುದ್ಧ ಬರ್ಮದ ಸೇನೆ ನಡೆಸಿದ ಜನಾಂಗೀಯ ಹತ್ಯೆಗೆ ಸಂಬಂಧಿಸಿದ ಜನಾಂಗೀಯ ಹತ್ಯೆಯ ಕುರಿತು ಬರ್ಮ ಪ್ರಜೆಗಳಾದ ರಾಯಿಟರ್ಸ್‍ನ ಪತ್ರಕರ್ತರು ವರದಿ ಮಾಡಿದ್ದು ಇವರಿಗೆ ಬರ್ಮಾ ಕೋರ್ಟು ಜೈಲು ಶಿಕ್ಷೆ ವಿಧಿಸಿದೆ. ವಾಲಾನ್,ಕ್ಯೋಸೋಯಿ ಎಂಬ ರಾಯಿಟರ್ಸ್ ವರದಿಗಾರರಿಗೆ ಶಿಕ್ಷೆಗೆಗುರಿಪಡಿಸಿ ಜೈಲಿಗೆ ತಳ್ಳಲಾಗಿದೆ. ಬರ್ಮದ ರಖೈನ್ ಸ್ಟೇಟ್‍ನಲ್ಲಿ 10 ರೋಹಿಂಗ್ಯನ್ ಮುಸ್ಲಿಮರನ್ನು ಸೇನೆ ಕಳೆದವರ್ಷ ಡಿಸೆಂಬರಿನಲ್ಲಿಹತ್ಯೆ ಮಾಡಿತ್ತು. ಇದಕ್ಕೆ ಸಂಬಂಧಿಸಿದ ವರದಿಯನ್ನು ಸಂಗ್ರಹಿಸುತ್ತಿದ್ದ ವೇಳೆ ಇಬ್ಬರನ್ನು ಬಂಧಿಸಲಾಗಿತ್ತು.

Leave a Reply