ಹನ್ನೊಂದು ವರ್ಷದ ಬಾಲಕಿಯ ಸಾಹಸಕ್ಕೆ ನೆಟ್ಟಿಗರು ತುಂಬಾ ಪ್ರಶಂಸೆಯನ್ನು ವ್ಯಕ್ತ ಪಡಿಸಿದ್ದಾರೆ. ತಾಯಿ ಮತ್ತು ಮಗಳು ಮನೆಗೆ ಬರುತ್ತಿದ್ದು, ತಾಯಿ ಸ್ಕೂಟಿ ಪಾರ್ಕ್ ಮಾಡುವ ಸಮಯದಲ್ಲಿ ಆಕೆಯ ಬಳಿ ದುಷ್ಕರ್ಮಿಯೊಬ್ಬ ಬಂದು ದರೋಡೆ ಮಾಡಲು ಪ್ರಯತ್ನಿಸುತ್ತಾನೆ. ಆಗ ಸ್ವಲ್ಪ ದೂರ ಮೆಟ್ಟಿಲ ಮೇಲೆ ನಿಂತು ತಾಯಿಯನ್ನು ಕಾಯುತ್ತಿದ್ದ ಮಗಳು ಓಡಿ ಬಂದು ಆ ದುಷ್ಕರ್ಮಿಯ ಮೇಲೆ ಎರಗಿ ಆತನಿಗೊಂದು ಬಲವಾದ ಪಂಚ್ ಕೊಡುತ್ತಾಳೆ. ಕೂಡಲೇ ತಾಯಿಯೂ ಮಗಳು ಸೇರಿ ಆ ದರೋಡೆಕೋರ ದುಷ್ಕರ್ಮಿಯನ್ನು ಓಡಿಸುತ್ತಾರೆ. ಈ ಘಟನೆ ಅರ್ಜಿಂಟೀನಾದ ಬ್ಯೂನಸ್ ಏರ್ಸ್ ನಗರದಲ್ಲಿ ಬುಧವಾರ ನಡೆದಿದ್ದು, ರಾತ್ರಿ ತಾಯಿ-ಮಗಳು ರಾತ್ರಿ 9.30ಕ್ಕೆ ಸ್ಕೂಟಿಯಲ್ಲಿ ಮನೆಗೆ ಆಗಮಿಸುವಾಗ ಆತ ಬಂದು ದೋಚುವ ಪ್ರಯತ್ನ ಮಾಡಿದ್ದ. ಮಗಳ ಸಾಹಸದಿಂದ ತಾಯಿ ಆಪಾಯದಿಂದ ಪಾರಾದರು. ವಿಡಿಯೋ ನೋಡಿ

Leave a Reply