Representational Image

ಭುವನೇಶ್ವರ: ಬಾವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ ಮಹಿಳೆ ಮತ್ತು ಆತನ ಪ್ರಿಯಕರನ ದುರಂತ ಆಂತ್ಯವಾಗಿದೆ. ಒಡಿಶಾದ ಅಂಗುಲ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಮರಕ್ಕೆ ನೇಣು ಬಿಗಿದು ಇಬ್ಬರು ಆತ್ಮಹತ್ಯೆ ಮಾಡಿದ ಘಟನೆ ವರದಿಯಾಗಿದೆ.  ನೇಣು ಬಿಗಿದು ಪತ್ತೆಯಾದ ಮೃತರು ಕುಮಾಂಡರ್ ಪ್ರದೇಶದ ರಾಜನ್ ಸಾಹು ಮತ್ತು ಸುಜಾತಾ ಸಾಹು ಎಂದು ಗುರುತಿಸಲಾಗಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ. ಈ ಜೋಡಿ ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದರು. ರಾಜನ್ ತನ್ನ ಬಾವನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಇವರ ಅಕ್ರಮ ಸಂಬಂಧ ಬಹಿರಂಗ ಆದ ಬಳಿಕ ಇಬ್ಬರು ಕಣ್ಮರೆಯಾಗಿದ್ದರು. ಇದೀಗ ಅವರ ಶವ ಪತ್ತೆಯಾಗಿದೆ.

ಅರಣ್ಯ ಪ್ರದೇಶದಲ್ಲಿ ಶವ ನೇತಾಡುತ್ತಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದರು. ಇಬ್ಬರ ಸಾವಿಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ ವಾದರೂ ಪೊಲೀಸರು ಶವವನ್ನು ಸ್ಥಳೀಯ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲು ಕೊಂಡೊಯ್ದಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

Leave a Reply