ವೇತನದ ಬದಲಿಗೆ ಶಾರೀರಿಕ ಸಂಬಂಧ ಹೊಂದಲು ನಿರಾಕರಿಸಿದ್ದಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ವೀಡಿಯೋ ವೈರಲ್ ಆಗಿದೆ.
ಗ್ರೇಟರ್ ನೊಯ್ಡಾದ ಒಂದು ಯೂನಿಸೆಕ್ಸ್ ಸಲೂನ್ ನಲ್ಲಿ ಕೆಲಸಕ್ಕಿರುವ ಮಹಿಳೆಯ ಮೇಲೆ ಸಲೂನ್ ಮಾಲಿಕ ಹಾಗೂ ಅವನ ಗೆಳೆಯರು ಕೂದಲು ಹಿಡಿದು ಎಳೆದಾಡುತ್ತಾ ಹಲ್ಲೆ ನಡೆಸುವ ವೀಡಿಯೋ ಬೆಳಕಿಗೆ ಬಂದಿದೆ.
ಮಹಿಳೆಯ ಹೇಳಿಕೆಯಂತೆ, ಮಹಿಳೆ ಸೆಲೂನ್ ನಲ್ಲಿ Rs. 17000 ವೇತನಕ್ಕಾಗಿ ಕೆಲಸಕ್ಕೆ ಸೇರಿದ್ದರು. ತಾನು ಸಂಬಳ ಪಡೆಯಲು ಹೋದಾಗ ಮಾಲೀಕ ವಸೀಮ್ ಮತ್ತು ಗೆಳೆಯರು ಅವರ ಜೊತೆ ವೇತನಕ್ಕೆ ಬದಲಿಯಾಗಿ ಶಾರೀರಿಕ ಬೆಳೆಸಲು ಹೇಳಿದರು. ಅದಕ್ಕೆ ನಾನು ನಿರಾಕರಿಸಿದ ಕಾರಣಕ್ಕೆ ನನ್ನ ಮೇಲೆ ಹಲ್ಲೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾಳೆ
ಸೋಮವಾರದಂದು ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ ಎಂದು ಎಸ್‌ ಎಸ್ ಪಿ (ಗ್ರಾಮೀಣ) ವಿನೀತ್ ಜೈಸ್ವಾಲ್ ತಿಳಿಸಿದ್ದಾರೆ.

Leave a Reply