2007 ರ ವಿಶ್ವಕಪ್ ನಲ್ಲಿ ಭಾರತ ಸೋತ ಬಳಿಕ ಕ್ರಿಕೆಟ್ ಬದುಕಿನಿಂದ ನಿವೃತ್ತಿಯಾಗುವುದನ್ನು ಸಚಿನ್ ತೆಂಡೂಲ್ಕರ್ ಬಹುತೇಕ ತೀರ್ಮಾನ ಮಾಡಿದ್ದರು, ಆದರೆ ಕ್ರಿಕೆಟ್ ದಂತ ಕತೆ ಮತ್ತು ವೆಸ್ಟ್ ಇಂಡೀಸ್ ಮಾಜಿ ಕಪ್ತಾನ ವಿವಿಯನ್ ರಿಚರ್ಡ್ಸ್ ರವರೊಂದಿಗೆ ಮಾತುಕತೆ ನಡೆಸಿದ ಬಳಿಕ ತನ್ನ ತೀರ್ಮಾನ ಬದಲಿಸಿದೆ ಎಂದು ಸಚಿನ್ ಇತ್ತೀಚೆಗೆ ಹೇಳಿದ್ದಾರೆ. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ಬಗ್ಗೆ ಬಹಳಷ್ಟು ವಿಮರ್ಶೆಗಳು ಬರುತ್ತಿತ್ತು. ಆಗ ನಾನು 90% ಕ್ರಿಕೆಟ್ ಅನ್ನು ತೊರೆಯುವುದನ್ನು ಖಚಿತ ಪಡಿಸಿದ್ದೆ. ಆದರೆ ನನ್ನ ಅಣ್ಣ ತೀರ್ಮಾನ ಬದಲಿಸುವಂತೆ ಹೇಳಿದರು. 2011 ರಲ್ಲಿ ಮುಂಬೈನಲ್ಲಿ ವಿಶ್ವ ಕಪ್ ಇದೆ ಆಗ ನಿನ್ನ ಕೈಯಲ್ಲಿ ಆ ಸುಂದರ ಟ್ರೋಫಿಯನ್ನುಯನ್ನು ನೆನೆಸಿಕೋ ಎಂದರು.  ಬಳಿಕ ನಾನು ನನ್ನಫಾರ್ಮ್ ಹೌಸ್ ಗೆ ಹೋದೆ, ಅಲ್ಲಿ ಸರ್ ವಿವಿಯನ್ ರಿಚರ್ಡ್ಸ್ ಕೆರೆ ಮಾಡಿ ಸುದೀರ್ಘ ಮಾತನಾಡಿದರು, ನನ್ನಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ಅವರು ನನಗೆ ಮನವರಿಕೆ ಮಾಡಿದರು, ಬಳಿಕ ನಾನು ನನ್ನ ತೀರ್ಮಾನ ಬದಲಿಸಿದೆ ಎಂದು ‘ಇಂಡಿಯಾ ಟುಡೆ’ ಕಾರ್ಯಕ್ರಮದಲ್ಲಿ ಸಚಿನ್ ಹೇಳಿದರು.

Leave a Reply