Representational image

ಮದುವೆ ದಿನ ಮನೆಗೆ ಬಂದ ವರನಿಗೆ ಮನೆಯಲ್ಲಿ ಫ್ರಿಡ್ಜ್ ಮತ್ತು ಕೂಲರ್ ಕಾಣಲಿಲ್ಲ. ಅದಕ್ಕೆ ಕೋಪಗೊಂಡ ವರ ಅಲ್ಲಿದ್ದ ಕುರ್ಚಿಯನ್ನು ಧ್ವಂಸ ಮಾಡಿದ್ದು, ಇದರಿಂದ ಕೋಪಗೊಂಡ ಮಹಿಳೆ ಇಂತಹ ವರದಕ್ಷಿಣೆ ಪಡೆಯುವ ಹಣ ಮೋಹಿ ಪತಿ ನನಗೆ ಬೇಡ ಎಂದು ಮದುವೆಯನ್ನೇ ನಿರಾಕರಿಸಿದ ಘಟನೆ ವರದಿಯಾಗಿದೆ. ಕೊನೆಗೆ ಎರಡೂ ಮನೆಯವರನ್ನು ಪೊಲೀಸ್ ಠಾಣೆಗೆ ಕರೆದು ಪರಸ್ಪರ ಚರ್ಚಿಸಿದರೂ ವಧು ಮದುವೆಯಾಗಲು ನಿರಾಕರಿಸಿದ ಕಾರಣ ಮದುಮಗ ಹಾಗೆಯೇ ಹಿಂದಿರುಗಬೇಕಾಯಿತು.
ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದ್ದು, ಮದುವೆ ದಿಬ್ಬಣದ ಜೊತೆ ಬಂದ ಗಂಡಿಗೆ ತಾನು ಕೇಳಿದ ಫ್ರಿಡ್ಜ್ ಮತ್ತು ಕೂಲರ್ ಮನೆಯ ಬಾಗಿಲ ಬಳಿ ಕಾಣದಾದಾಗ ಆತ ಕುಪಿತ ಗೊಂಡು ಕುರ್ಚಿಯನ್ನು ನೆಲಕ್ಕೆ ಬಡಿದನು.

Leave a Reply