ಲಂಡನ್ : ಟೆಸ್ಟ್ ಕ್ರಿಕೆಟ್, ಏಕ ದಿನ ಪಂದ್ಯ, ಟ್ವೆಂಟಿ ಟ್ವೆಂಟಿ ಕ್ರಿಕೆಟ್, ಐಪಿಎಲ್ ಹೀಗೆ ಕ್ರಿಕೆಟ್ ಕಾಲ ಕಾಲಕ್ಕೆ ಬದಲಾಗುತ್ತಾ ಇದೆ. ಇದೀಗ 100-ಬಾಲ್ ಕ್ರಿಕೆಟ್ ಸ್ವರೂಪವನ್ನು ಇಂಗ್ಲೆಂಡ್ ಮಂಡಳಿಯು ಪ್ರಸ್ತಾಪಿಸಿದ್ದು, ಈ ಬಗ್ಗೆ ಭಾರತ ಕ್ರಿಕೆಟ್ ಕಪ್ತಾನ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. “ವಾಣಿಜ್ಯ ದೃಷ್ಟಿಕೋನಗಳಿಂದ” ಕ್ರಿಕೆಟ್ ಗುಣಮಟ್ಟ ಕಳೆದುಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

“ನಾನು ಐಪಿಎಲ್ ಕ್ರಿಕೆಟ್ ಇಷ್ಟಪಡುತ್ತೇನೆ. ಬ್ರಿಟಿಷ್ ಬಿಗ್ ಬ್ಯಾಷ್ ಲೀಗ್ (ಬಿಬಿಸಿ) ನೋಡುತ್ತೆನೆ. ಏಕೆಂದರೆ ಈ ಮಾದರಿಯಲ್ಲಿ ನಾವು ಸ್ಪರ್ಧಾತ್ಮಕ ಆಟವನ್ನು ಕಾಣಲು ಸಾಧ್ಯವಿದೆ. ಒಬ್ಬ ಕ್ರಿಕೆಟಿಗನಾಗಿ ಇದನ್ನು ನೋಡಲು ಸಂತಸವಾಗುತ್ತದೆ. ಆದರೆ ಕ್ರಿಕೆಟ್ ನಲ್ಲಿ ಮತ್ತಷ್ಟು ಪ್ರಯೋಗಗಳನ್ನು ಮಾಡುವುದಕ್ಕೆ ನನಗೆ ಸಮಾಧಾನವಿಲ್ಲಾ. ಆದ್ದರಿಂದ ಅಂತಹ ಕ್ರಿಕೆಟ್ ನಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಮೂರು ಸ್ವರೂಪಗಳ ಕ್ರಿಕೆಟ್ ನಲ್ಲಿ ಭಾರತವನ್ನು ಮುನ್ನಡೆಸುವ ಕೊಹ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದರು.

“ನಾನು ಈಗಾಗಲೇ ತುಂಬಾ ಖುಷಿಯಿಂದಿದ್ದೇನೆ … ಸಂಪೂರ್ಣ ನಿರಾಶೆಗೊಂಡಿಲ್ಲ. ಕ್ರಿಕೆಟ್ ತನ್ನ ನೈಜ ಗುಣಮಟ್ಟವನ್ನು ಕಳೆದುಕೊಳ್ಳುತ್ತಿದೆ ಎನ್ನುವಾಗ ನನಗೆ ನೋವುಂಟು ಮಾಡುತ್ತದೆ ಎಂದು ಎಂದು ಕೊಹ್ಲಿ ‘ವಿಸ್ಡನ್ ಕ್ರಿಕೆಟ್ ಮಾಸಿಕ’ಕ್ಕೆ ಹೇಳಿದರು.

Leave a Reply