ಗ್ಯಾಂಗ್ ನ ಮಾಹಿತಿಯನ್ನು ನೀಡಿದ ಹುಡುಗಿಯನ್ನು, ಸುರಂಗದೊಳಗೆ ವಿವಸ್ತ್ರಗೊಳಿಸಿ ಕೊಲೆಗೈಯಲಾಗಿದೆ.
ಅಮೇರಿಕಾದಲ್ಲಿ ಈ ವಾರ ಆರಂಭದಲ್ಲಿ ಓರ್ವ 14 ವರ್ಷದ ಹುಡುಗಿಯ ಶವ ಸುರಂಗದಲ್ಲಿ ದೊರೆತಿದ್ದು, ಕೆಲವು ಹದಿ ಹರೆಯದವರ ಗ್ಯಾಂಗ್ ನಿಂದ ಅವಳನ್ನು ಹೊಡೆಯುವ ಹಾಗೂ ಕೊಲ್ಲುವ ಮೊದಲು ವಿವಸ್ತ್ರಗೊಳಿಸಲಾಗಿತ್ತು.
ಮೃತ ಅರಿಯಾನಾ ಫ್ಯೂನ್ಸ್- ಡಿಯಾಝ್ ಗ್ಯಾಂಗ್ ನ ಅಪರಾಧಗಳ ವಿವರವನ್ನು ಬಹಿರಂಗ ಗೊಳಿಸಿದ್ದಳು,
ಆದರೆ ಎಪ್ರಿಲ್ 18 ರಂದು ಅವಳನ್ನು ಸುರಂಗಕ್ಕೆ ಕರೆಯಿಸಿ ಹತ್ಯೆ ಮಾಡಲಾಯಿತು. ನಿಜವಾಗಿ ಆ ಹುಡುಗಿ ಗ್ಯಾಂಗ್ ನ ವಿವರನ್ನು  ಅಧಿಕಾರಿಗಳಿಗೆ ತಿಳಿಸಿದ್ದಳು. ಈ ಗ್ಯಾಂಗ್ ಲೂಟಿ ಮತ್ತು ಮತ್ತಿತರ ಅಪರಾಧ ಕೃತ್ಯದಲ್ಲಿ ಭಾಗಿಯಾಗಿತ್ತು. ಕಳೆದ ಒಂದು ತಿಂಗಳಿಂದ ಆಕೆ ಕಾಣೆಯಾಗಿದ್ದು , ಬುಧವಾರ ಆಕೆಯ ಶರೀರ ದೊರೆತ ಬಳಿಕ ಇಬ್ಬರನ್ನು ಬಂಧಿಸಲಾಗಿತ್ತು.

Leave a Reply