ಫಿಲಿಪೈನ್ ನಲ್ಲಿ ಮದುವೆಯ ಸಂದರ್ಭದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮದುವೆಯ ವೇಳೆ ಜೋಡಿಯೊಂದು ಫೋಟೋ ತೆಗೆಯುವ ವೇಳೆ ಪರಸ್ಪರ ಮುತ್ತಿಟ್ಟುಕೊಳ್ಳುವ ಈ ವಿಡಿಯೋ ಇದಾಗಿದ್ದು, ವೈರಲ್ ಪ್ರೆಸ್ ಎಂಬ ಯೌಟ್ಯೂಬ್ ಚಾನೆಲ್ ಇದನ್ನು ಅಪ್ಲೋಡ್ ಮಾಡಿದೆ.

ಈ ಸಂದರ್ಭದಲ್ಲಿ ಅಲ್ಲಿದ್ದ ಇಬ್ಬರು ಮಕ್ಕಳನ್ನು ಕಣ್ಣು ಮುಚ್ಚುವಂತೆ ಹೇಳುತ್ತಾರೆ. ಆಗ ಮಕ್ಕಳಿಬ್ಬರೂ ಪರಸ್ಪರ ಕಣ್ಣು ಮುಚ್ಚುತ್ತಾರೆ. ಈ ಸಂದರ್ಭದಲ್ಲಿ ದಂಪತಿಗಳು ಪರಸ್ಪರ ಕಿಸ್ ಕೊಡುವ ವೇಳೆ ಅಲ್ಲಿದ್ದ ಗಂಡು ಮಗು ಅವರನ್ನು ಅನುಕರಿಸಲು ಹೋಗಿ ಮುಜುಗರಕ್ಕೀಡಾಗುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನ ಸೆಳೆದಿದೆ.

ಪುಟ್ಟ ಬಾಲಕ ಹುಡುಗಿಗೆ ಕಿಸ್ ಕೊಡಲು ಮುಂದಾದಾಗ ಬಾಲಕಿ ನಾಚಿಕೆ ಪಟ್ಟರೆ ಅಲ್ಲಿದ್ದವರಿಗೆ ನಗು ತಡೆಯಲಾಗಲಿಲ್ಲ ಮತ್ತು ಬಾಲಕ ನಾಚಿಕೊಂಡು ಹಿಂದೆ ಹೋಗುವುದನ್ನು ಕಾಣಬಹುದು.

Leave a Reply