ಬಾಗ್ದಾದ್: ಇರಾಕ್ ನಲ್ಲಿ ಸರಕಾರದ ವಿರುದ್ಧದ ಸಾರ್ವಜನಿಕರ ಪ್ರತಿಭಟನೆ ತೀವ್ರವಾಗಿದೆ. ದೇಶದ ಸಾರ್ವಜನಿಕರ ಸೇವೆಗಳ ಲೋಪಗಳನ್ನು ಜನರ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಆಗ್ರಹಿಸಿ ಸಾವಿರಾರು ಜನರು ಬೀದಿಗಿಳಿದಿದ್ದಾರೆ.

ದೇಶದ ಪ್ರಮುಖ ತೈಲೋತ್ಪಾದನಾ ಕೇಂದ್ರವಾದ ಬಸ್ರಾ ಪ್ರದೇಶದಲ್ಲಿ ಜನರು ಸರಕಾರದ ರಾಜಕೀಯ ಪಕ್ಷಗಳ ಕಚೇರಿ ಕಟ್ಟಡಗಳಿಗೆ ಬೆಂಕಿ ಹಚ್ಚುತ್ತಿದ್ದರು. ಈಗಾಗಲೇ ಈ ಪ್ರತಿಭಟನೆಕೆ ಸಿಲುಕಿ ಹನ್ನೊಂದು ಜನರು ಬಲಿಯಾಗಿದ್ದಾರೆ. ಕಳೆದ ನಾಲ್ಕು ದಿನಗಳಿಂದ ನಿರಂತರ ಪ್ರತಿಭಟನೆಗಳು ನಡೆಯುತ್ತಿದೆ.

ಜನರು ಮತ್ತು ಭದ್ರತಾ ಪಡೆಯ ನಡುವೆ ಸಂಘರ್ಷವೇರ್ಪಟ್ಟು ಹಲವರಿಗೆ ಗಾಯವಾಗಿದೆ. ಸರಕಾರಿ ಕಚೇರಿಗಳ ಮೇಲೆಯೂ ಬಾಂಬಿಂಗ್ ದಾಳಿ ಮಾಡಲಾಗಿದೆ.

Leave a Reply