ಶ್ರೀಲಂಕಾದಲ್ಲಿ ಕಳೆದ ರವಿವಾರ ಈಸ್ಟರ್ ದಿನದಂದು ನಡೆದ ಸರಣಿ ಬಾಂಬ್ ಸ್ಪೋಟದ ಹಿಂದೆ ಮುಸ್ಲಿಮ್ ಭಯೋತ್ಪಾದಕರ ಕೈವಾಡ ಇರಬಹುದು ಎಂಬ ಶಂಕೆ ಬಲವಾಗಿರುವುದರಿಂದ ದೇಶ ಪ್ರಧಾನಿ ರನಿಲ್ ವಿಕ್ರಮ ಸಿಂಘೆಯವರು ನಿನ್ನೆ ಪತ್ರಿಕಾಗೋಷ್ಟಿ ಕರೆದು ಮಾತನಾಡಿದ್ದು, ಈ ದಾಳಿ ನಡೆಸಿದ ಭಯೋತ್ಪಾದಕರಿಗೆ ನಮ್ಮ ದೇಶದ ಮುಸ್ಲಿಮರ ಬೆಂಬಲವಿಲ್ಲ. ಮುಸ್ಲಿಮರಿಗೆ ಈ ಭಯೋತ್ಪಾದನಾ ಕೃತ್ಯದ ಬಗ್ಗೆ ಬಹಳ ಸಿಟ್ಟಿದೆ. ಈ ದಾಳಿಯ ಹಿಂದೆ ಇಸ್ಲಾಮಿಕ್ ಭಯೋತ್ಪಾದಕ ಸಂಘಟನೆಯೊಂದರ ಕೈವಾಡವಿದೆ ಎಂದು ತಿಳಿದು ಬಂದಿದೆ. ಆದರೆ ಮುಸ್ಲಿಮರು ಈ ಸಂಘಟನೆಗೆ ಬೆಂಬಲ ನೀಡುತ್ತಿಲ್ಲ. ಈ ಸಂಘಟನೆ ದೇಶದ ಮುಸ್ಲಿಮರು ವಿರೋಧಿಸುವ ಸಂಘಟನೆಯಾಗಿದೆ. ಇದು ಕೇವಲ ಕೆಲವು ವ್ಯಕ್ತಿಗಳ ಕೆಲಸ. ಇದರ ಬಗ್ಗೆ ಶ್ರೀಲಂಕಾ ನಾಗರಿಕರಿಗೆ ಚೆನ್ನಾಗಿ ಗೊತ್ತಿದೆ. ನಮ್ಮ ದೇಶದ ಗೌರವಾನ್ವಿತ ಬೌದ್ಧ ಧರ್ಮ ಗುರುಗಳು ಹಾಗೂ ಮುಸ್ಲಿಮ್ ಉಲೆಮಾಗಳ ಸಹಕಾರದೊಂದಿಗೆ ನಾವು ದೇಶದಲ್ಲಿ ಸ್ಫೋಟದ ನಂತರ ಶಾಂತಿ ಕಾಪಾಡಿದ್ದೇವೆ ಎಂದು ತಿಳಿಸಿದರು.

ನಾವು ಎಲ್ಟಿಟಿಇ ಪ್ರಾರಂಭಿಸಿದ್ದ ಯುದ್ಧವನ್ನು ಮಟ್ಟಹಾಕಿದ್ದೇವೆ. ಭಯೋತ್ಪಾದನೆ ಮತ್ತು ಆತ್ಮಾಹುತಿ ದಾಳಿಗಳು ಅದರ ಅಜೆಂಡಾವಾಗಿತ್ತು. ಇದೀಗ ನಮ್ಮ ಮುಂದಿರುವ ಸವಾಲು ಭಿನ್ನವಾಗಿದೆ. ಭಯೋತ್ಪಾದನೆ ಬೇರೆ ಬೇರೆ ರೂಪದಲ್ಲಿ ಬರುತ್ತದೆ. ಇದು ಅಂತಾರಾಷ್ಟ್ರೀಯ ಮಟ್ಟದ ಸವಾಲಾಗಿದೆ. ಇದನ್ನು ಕೂಡ ನಾವು ಎದುರಿಸಲಿದ್ದೇವೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

Leave a Reply