ಅಮೇರಿಕಾದ ಟೆನ್ನಿಸ್ಸಿ ಪ್ರಾಂತ್ಯದ
ಮೇಯರ್ ಆಗಿ ಖ್ಯಾತ ರಸ್ಲಿಂಗ್ ಪಟು ಅಭಿಮಾನಿಗಳಿಂದ ಖೇನ್ ಎಂದೇ ಕರೆಯಲ್ಪಡುವ ಗ್ಲೆನ್ ಜೇಕಬ್ ಆಯ್ಕೆಗೊಂಡಿದ್ದಾರೆ.

ಕಳೆದ ಮೇ ತಿಂಗಳಿನಲ್ಲಿ ನಡೆದ ಪ್ರಾಥಮಿಕ ಚುನಾವಣೆಯಲ್ಲಿ ಗ್ಲೆನ್ ವಿಜಯಿಯಾಗಿದ್ದರೂ ಫಲಿತಾಂಶದ ವಿವರದ ವೆಬ್ ಸೈಟ್ ಹಾಳಾದ ಕಾರಣ ಫಲಿತಾಂಶದ ಘೋಷಣೆಯಾಗಿರಲಿಲ್ಲ.

ರಿಪಬ್ಲಿಕನ್ ಪಕ್ಷದ ಗ್ಲೆನ್‍ರವರು ಇನ್ಶೂರೆನ್ಸ್ ಕಂಪೆನಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರವನ್ನು ನಡೆಸುತ್ತಿದ್ದು, ಪ್ರತಿಸ್ಪರ್ಧಿ ಡೆಮಾಕ್ರೆಟಿಕ್ ಪಕ್ಷದ ಲಿಂಡ ಹೆಯ್ನಿ ವಿರುದ್ಧ ಗ್ಲೆನ್ ಬಾರೀ ಮತಗಳ ಅಂತರದಿಂದ ಜಯಶಾಲಿಯಾಗಿದ್ದರು.

ರಿಂಗ್ ನೊಳಗೆ ಮಾತ್ರವಲ್ಲ ಆಡಳಿತದಲ್ಲಿಯೂ ನಾನು ಮಲ್ಲನೆಂಬುದನ್ನು ತೋರಿಸಲು ಕೇನ್ ಸಿದ್ಧರಾಗಿದ್ದಾರೆ.

Leave a Reply