ಕನಯ್ಯಾ ಕುಮಾರ್‌ ಕಾಂಗ್ರೆಸ್ ಪಕ್ಷ ಸೇರಿದ ಬಗ್ಗೆ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಮಾತನಾಡಿ, ದೇಶ ವಿರೋಧಿ ಕಾಂಗ್ರೆಸ್ ಕನಯ್ಯಾ ಕುಮಾರ್‌ಗೆ ಸರಿಯಾದ ಸ್ಥಳವಾಗಿದೆ ಎಂದು ನಿನ್ನೆ ಸಿಪಿಐ ತೊರೆದು ಕಾಂಗ್ರೆಸ್ ಸೇರಿದ ಕನಯ್ಯಾ ಕುಮಾರ್‌ ಅವರ ನಿರ್ಧಾರಕ್ಕೆ ಅವರು ಪ್ರತಿಕ್ರಿಯಿಸಿದರು.

‘ದೇಶವಿರೋಧಿ ಸಿದ್ಧಾಂತಗಳನ್ನು ಬೆಂಬಲಿಸುವವರ ಮೊದಲ ಆಯ್ಕೆ ಕಾಂಗ್ರೆಸ್. ಕಾಂಗ್ರೆಸ್ ಮತ್ತು ಅದರ ನಾಯಕತ್ವವು ರಾಷ್ಟ್ರ ವಿರೋಧಿ ರಾಜಕೀಯಕ್ಕೆ ಸಮಾನಾರ್ಥಕವಾಗಿದೆ. ಕನಯ ಕುಮಾರ್ ಅವರಂತಹವರಿಗೆ ಕಾಂಗ್ರೆಸ್ ಸರಿಯಾದ ಸ್ಥಳವಾಗಿದೆ/ ದೆಹಲಿಯಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಸಂದರ್ಭದಲ್ಲಿ ಅನೇಕ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ ಅವರಂತಹ ಜನರನ್ನು ಸ್ವಾಗತಿಸುವ ಮೂಲಕ ಕಾಂಗ್ರೆಸ್ ಎಷ್ಟು ರಾಷ್ಟ್ರವಿರೋಧಿ ಎಂಬುದನ್ನು ಸಾಬೀತುಪಡಿಸುತ್ತಿದೆ ಎಂದು ಅವರು ಹೇಳಿದರು.

ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಸಿಪಿಐ ರಾಷ್ಟ್ರೀಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದ ಕನಯ್ಯಾ ಕುಮಾರ್‌ ಅವರು ನಿನ್ನೆ ಸಂಜೆ ಕಾಂಗ್ರೆಸ್ ಸೇರಿದ್ದಾರೆ. ಕನಯ್ಯಕುಮಾರ್ ಜೊತೆಗೆ, ಗುಜರಾತ್ ದಲಿತ ನಾಯಕ ಮತ್ತು ಶಾಸಕ ಜಿಗ್ನೇಶ್ ಮೇವಾನಿ ನಿನ್ನೆ ಕಾಂಗ್ರೆಸ್ ಸೇರಿದರು. ರಾಹುಲ್ ಗಾಂಧಿ ಇಬ್ಬರನ್ನು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾಗತಿಸಿದರು.

Leave a Reply