ಮಕ್ಕಳ ಮರಣವು ಹೆತ್ತವರಿಗೆ ಅತ್ಯಂತ ದೊಡ್ಡ ದುಃಖವಾಗಿದೆ. ಈ ದುಃಖದ ನೋವು ಹೆತ್ತವರನ್ನು ಒಳಗಿಂದ ಒಳಗೆ ಕೊರೆಯುತ್ತಿರುತ್ತದೆ. ಆ ಮಕ್ಕಳ ನೆನಪಿನಲ್ಲಿ ಕೆಲವು ತಂದೆ ತಾಯಿ ಏನಾದರೂ ಒಳ್ಳೆಯದನ್ನು ಮಾಡುತ್ತಾರೆ. ಉದಾಹರಣೆಗೆ, ಕಾರು ಅಪಘಾತದಲ್ಲಿ ಮೃತಪಟ್ಟ ಮಗನ ಅಂಗಾಂಗಗಳನ್ನು ದಾನ ಮಾಡಲು ತಂದೆ ನಿರ್ಧರಿಸಿದ್ದು, ಅದಕ್ಕೆ ಬದಲಾಗಿ ಅವರಿಗೊಂದು ದೊಡ್ಡ ಕಳುಹಿಸಲಾಗಿತ್ತು.

ಆ ಉಡುಗೊರೆ ನೋಡಿ ಆ ತಂದೆ ತುಂಬಾ ಭಾವುಕರಾದರು. ಇದರ ವಿಡಿಯೋ ಟ್ವಿಟರ್ ನಲ್ಲಿ ತುಂಬಾ ಜನರನ್ನು ಭಾವುಕರಾಗುವಂತೆ ಮಾಡಿದೆ.. ಜಾನ್ ಎಂಬುವರ 16 ವರ್ಷದ ಮಗ ಕಳೆದ ವರ್ಷ ಕಾರು ಅಪಘಾತದಲ್ಲಿ ಅಸುನೀಗಿದ್ದ. ಅವನ ಅಂಗಾಂಗವನ್ನು ದಾನ ಮಾಡಿದ್ದರು. ಅವರ ಮಗನ ಹೃದವನ್ನು ಕಸಿ ಮಾಡಿದ ವ್ಯಕ್ತಿಯು ಅವರಿಗೊಂದು ಗೊಬೆಯ ಆಟಿಕೆ ಗಿಫ್ಟ್ ಆಗಿ ಕಳುಹಿಸಿದ್ದಾರೆ. ಟೆಡಿ ಬೇರ್ ಗೊಂಬೆಯಲ್ಲಿ ಅವರ ಮಗನ ಹೃದಯ ಬಡಿತವನ್ನು ಸೆರೆ ಹಿಡಿದಿದ್ದಾರೆ. ಮಾತ್ರವಲ್ಲ ಆ ಗಿಫ್ಟ್ ಜೊತೆಗೆ ಒಂದು ಪತ್ರವನ್ನು ಕೂಡ ನೀಡಲಾಗಿದೆ.

ಆ ಪತ್ರದಲ್ಲಿ ಹೀಗೆ ಬರೆಯಲಾಗಿದೆ, ನಾನು ಅದನ್ನು ನಿಮಗಾಗಿ ನೀಡಲು ಬಯಸುತ್ತೇನೆ” ಟೆಡ್ಡಿ ಬೇರ್ ‘ಬೆಸ್ಟ್ ಡ್ಯಾಡ್ ಎವರ್’ ಪ್ರಿಂಟ್ ಟೀ ಶರ್ಟ್ ಧರಿಸಿದ್ದು, ಅದು ಮಗನ ಹೃದಯ ಬಡಿತವನ್ನು ಹೊಂದಿದೆ. ಬಡಿತಗಳನ್ನು ದಾಖಲಿಸುತ್ತದೆ. ಅವರ ಎಮೋಷನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • ಭಾವುಕ ವಿಡಿಯೋ ನೋಡಿ 

https://twitter.com/i/status/1238497437272203265

 

Leave a Reply