ಬಿಹಾರದಲ್ಲಿ ಹುಟ್ಟಿದ ಮೂವರು ಐಎಎಸ್ ಅಧಿಕಾರಿಗಳು ಅಲ್ಲಿನ ಬಡ ಮಕ್ಕಳಿಗಾಗಿ ಶಾಲೆಯನ್ನು ತೆರೆದು ಉಚಿತವಾಗಿ ಕಲಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗೆ ಅಂಬೇಡ್ಕರ್ ಇನಿಶಿಯೇಟಿವ್ ಫಾರ್ ಮಾರ್ಜಿನಲೈಸ್ಡ್ AIM ಎಂದು ಹೆಸರಿಸಿದ್ದು ಈಗ ಆ ಶಾಲೆಯಲ್ಲಿ ಸರಿ ಸುಮಾರು 450ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಬಿಹಾರದ ಗೋಪಾಲಗಂಜ್, ಸಮಸ್ತಿಪುರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ಆರಂಭಿಸಿದ ಅವರು ತಮ್ಮ ಸಾಮಾಜಿಕ ಜವಾಬ್ದಾರಿಯಾಗಿ ಈ ಶಾಲೆಯನ್ನು ಸ್ಥಾಪಿಸಿದ್ದಾರೆ. ಕೇವಲ ಉಚಿತ ಭೋದನೆ ಮಾತ್ರವಲ್ಲ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತಿದ್ದಾರೆ.

TNIE

ಸಂತೋಷ್ ಕುಮಾರ್, ವಿಜಯ್ ಕುಮಾರ್ ಮತ್ತು ರಂಜನ್ ಪ್ರಕಾಶ್ ಈ ಮೂವರು ಶಾಲೆ ತೆರೆದ ಮಹಾನುಭಾವರು. ಇವರಲ್ಲಿ ಸಂತೋಷ್ 2014ರ ಬ್ಯಾಚ್‌ನ ಐಎಎಸ್ ಅಧಿಕಾರಿ. ಅವರು ಪ್ರಸ್ತುತ ಅರುಣಾಂಚಲ್ ಪ್ರದೇಶದಲ್ಲಿ ಆಯ್ಕೆಯಲ್ಲಿದ್ದಾರೆ. ವಿಜಯ್ ಸಂತೋಷ್ ಅವರ ಬ್ಯಾಚ್‌ಮೇಟ್ ಆಗಿದ್ದು, ಯುಪಿಯ ಗೋರಖ್‌ಪುರದಲ್ಲಿ ಭಾರತೀಯ ರೈಲ್ವೇ ಸಂಚಾರ ಸೇವೆಯಲ್ಲಿ ನೇಮಕಗೊಂಡಿದ್ದಾರೆ. ರಂಜನ್ ಪ್ರಕಾಶ್ ಸಿಆರ್‌ಪಿಎಫ್‌ನಲ್ಲಿ ಡೆಪ್ಯೂಟಿ ಕಮಾಂಡೆಂಟ್ ಆಗಿದ್ದು, ಅಸ್ಸಾಂನಲ್ಲಿ ನೇಮಕಗೊಂಡಿದ್ದಾರೆ.

ಸುಮಾರು ಆರು ಶಿಕ್ಷಕರನ್ನು ನೇಮಿಸಿ ಅವರಿಗೆ ವೇತನದ ವ್ಯವಸ್ಥೆಯನ್ನು ಮಾಡಿದ್ದಾರೆ. ಶಿಕ್ಷಕರನ್ನು ನೇಮಿಸಿಕೊಳ್ಳುವ ಮುನ್ನ ಈ ಅಧಿಕಾರಿಗಳೇ ಮಕ್ಕಳಿಗೆ ಪಾಠ ಮಾಡುತ್ತಿದ್ದರು. ಈಗಲೂ ಹಳ್ಳಿಗೆ ಬಂದರೆ ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುತ್ತಾರೆ.

Leave a Reply