ಮುಂಬೈ : ಮುಂಬೈನ ಐಷಾರಾಮಿ ಹೊಟೇಲ್‌ನಲ್ಲಿ ಹೃದಯಾಘಾತಕ್ಕೆ ಒಳಗಾದ ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟ್ ಪಟು 59 ವರ್ಷದ ಡೀನ್ ಜೋನ್ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲು ಆಸ್ಟ್ರೇಲಿಯಾದವರೇ ಆದ ಮಾಜಿ ವೇಗಿ ಬ್ರೆಟ್ ಲೀ ಹರಸಾಹಸಪಟ್ಟಿದ್ದರು ಎನ್ನುವುದು ಬಹಿರಂಗವಾಗಿದೆ.

ಡೀನ್ ಜೋನ್ ಆವರು, ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗೆ ಐಪಿಎಲ್ 2020 ಕ್ರಿಕೆಟ್ ಪಂದ್ಯಾವಳಿಯ ವೀಕ್ಷಕ ವಿವರಣೆ ನೀಡಲು ಭಾರತಕ್ಕೆ ಬಂದಿದ್ದರು. ಸೆ. 24 ರಂದು ಜೋನ್ಸ್, ಬ್ರೆಟ್ ಲೀ ಅವರೊಂದಿಗೆ ತಾವು ತಂಗಿದ್ದ ಮುಂಬೈನ ಹೋಟೆಲ್ ಲಾಬಿಯೊಳಗೆ ಪ್ರವೇಶಿಸುವ ಸಂದರ್ಭದಲ್ಲಿ ಕುಸಿದುಬಿದ್ದರು. ಆಗ ಡೀನ್ ಜೋನ್ಸ್ ಅವರ ಜೊತೆಗಿದ್ದ ಬೈಟ್ ಲೀ ಅವರಿಗೆ ಕೃತಕ ಉಸಿರಾಟ ನೀಡುವ ಮೂಲಕ ಜೀವ ಉಳಿಸಲು ಪ್ರಯತ್ನಿಸಿದ್ದರು ಎಂದು ಆಸ್ಟ್ರೇಲಿಯಾದ ಡೇಲಿ ಮೇಲ್ ವರದಿ ವಾಡಿದೆ. ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಡೀನ್ ಜೋನ್ಸ್ ಕೊನೆಯುಸಿರನ್ನೆಳೆದರು.

ಡೀನ್ ಜೋನ್ಸ್ ಕುಸಿದುಬಿದ್ದುದ್ದನ್ನು ನೋಡಿದ ಬ್ರೆಟ್ ಲೀ, ಕೂಡಲೇ ಇದು ಹೃದಯಾಘಾತ ಎಂಬುದನ್ನು ಅರಿತು ಅವರಿಗೆ ತುರ್ತು ಸಿಪಿಆರ್ (ಕಾರ್ಡಿಯೋಪಲ್ಮನರಿ ರೆಸುಸ್ವಿಟೇಷನ್) ಅನುಸರಿಸಿದ್ದರು. ಜೋನ್ಸ್ ಅವರ ಎದೆಯ ಭಾಗವನ್ನು ಒತ್ತುವ ಮೂಲಕ ಎರಡು ಬಾರಿ ಹೃದಯ ಬಡಿತವನ್ನು ಸರಿಪಡಿಸಿದ್ದರು. ಜತೆಗೆ ಅವರ ಬಾಯಿಗೆ ಬಾಯಿಟ್ಟು ಉಸಿರು ಕೂಡ ನೀಡಿದ್ದರು. ಆಂಬುಲೆನ್ಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಆಗಮಿಸುವ ವರೆಗೂ ಡೀನ್ ಜೋನ್ಸ್ ಅವರ ಉಸಿರಾಟ ಹಾಗೂ ಎದೆ ಬಡಿತ ನಿಲ್ಲದಂತೆ ಹೋಟೆಲ್‌ನಲ್ಲಿ ಬ್ರೆಟ್ ಲೀ ಸತತ ಪ್ರಯತ್ನ ನಡೆಸಿದ್ದರು. ಆಂಬುಲೆನ್ಸ್ ಬಂದ ಬಳಿಕ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಜೋನ್ಸ್ ಬದುಕುಳಿಯಲಿಲ್ಲ.

Leave a Reply