ಜೆರ್ರಿ ವಿಂಡಲ್ ಒಬ್ಬ LGBT ಅವನು ಎಂದಿಗೂ ತಂದೆಯಾಗುವುದಿಲ್ಲ ಎಂದು ಜನರು ನಿರಂತರವಾಗಿ ಹೇಳುತ್ತಿದ್ದರು. ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದ ವಿಂಡಲ್ ತಾನು ಎಂದಿಗೂ ತಂದೆಯಾಗುತ್ತೇನೆ ಎಂದು ಸ್ವತಃ ನಂಬಲಿಲ್ಲ, ಆದರೆ ಒಂದು ದಿನ ಅವನ ಜೀವನವು ಸಂಪೂರ್ಣವಾಗಿ ಬದಲಾಯಿತು. ಅವನು ತಂದೆಯಾದ ಪ್ರಯಾಣವು ಒಂದು ಕಾಲ್ಪನಿಕ ಕಥೆಯಂತೆ ತೋರುತ್ತದೆ, ಮತ್ತು ಕರುಣಾಮಯಿ ಹೃದಯವು ಯಾವುದೇ ಯುದ್ಧವನ್ನು ಗೆಲ್ಲುತ್ತದೆ ಎಂಬುದಕ್ಕೆ ಇದು ಪುರಾವೆಯಾಗಿದೆ.
ತಾನು ತಂದೆಯಾಗಬೇಕು ಎನ್ನುವ ಹಟದಲ್ಲಿ ಜೆರ್ರಿ ಅಮೇರಿಕಾದಲ್ಲಿ ಮಗು ಒಂದನ್ನು ದತ್ತು ಪಡೆಯಲು ತುಂಬಾ ಶ್ರಮ ಪಟ್ಟರು ಆದರೆ ಅದು ಸಾಧ್ಯವಾಗಲಿಲ್ಲ , ಒಂದು ದಿನ ಅವರು ಒಂದು ನಿಯತಕಾಲಿಕ (ಮೆಗಾಝಿನ್) ಓದುತ್ತ ಇರುವಾಗ ಅದರಲ್ಲಿ ಕಾಂಬೋಡಿಯಾದಲ್ಲಿ ಅನಾಥ ಮಕ್ಕಳ ಜೀವನವನ್ನು ವಿವರಿಸುವ ಕಥೆಯನ್ನು ಓದಿದರು. ಅವರು ಕಾಂಬೋಡಿಯನ್ ಅಧಿಕಾರಿಗಳನ್ನು ಸಂಪರ್ಕಿಸಲು ಒಂದು ಕ್ಷಣವೂ ಹಿಂಜರಿಯಲಿಲ್ಲ ಕೆಲ ದಿನಗಳಲ್ಲೇ ಅವರ ಜೀವನವನ್ನು ಬದಲಾಯಿಸುವ ಸುದ್ದಿಯೊಂದನ್ನು ಪಡೆದರು.
2000 ರ ಜೂನ್‌ನಲ್ಲಿ, ಜೆರ್ರಿ ಕಾಂಬೋಡಿಯಾದ ನೊಮ್ ಪೆನ್‌ಗೆ ಧಾವಿಸಿದರು, ಅಲ್ಲಿ ಅವರ ಭವಿಷ್ಯದ ಮಗ ಜೋರ್ಡಾನ್ ಜನ್ಮ ಪೋಷಕರು ಮರಣಹೊಂದಿದಾಗಿನಿಂದ ಅನಾಥಾಶ್ರಮದಲ್ಲಿ ವಾಸಿಸುತ್ತಿದ್ದ. ಅಪೌಷ್ಟಿಕತೆ ಮತ್ತು ತೀವ್ರವಾದ ಸೋಂಕಿನಿಂದ ಬಳಲುತ್ತಿದ್ದ ಜೋರ್ಡಾನನ್ನು ಜೆರ್ರಿ ಫ್ಲೋರಿಡಾದ ತನ್ನ ಮನೆಗೆ ಕರೆದೊಯ್ದು ಚಿಕೆತ್ಸೆ ನೀಡಲಾರಂಭಿಸಿದರು ಮತ್ತು ಅವನನ್ನು ದತ್ತು ಮಗನಾಗಿ ಸ್ವೀಕರಿಸದರು.
ಆದರೆ ಅವರ ಈ ಪಯಣವು ಅಷ್ಟೊಂದು ಸುಲಭವಾಗಿರಲಿಲ್ಲ ಜೋರ್ಡಾನ್‌ಗೆ ಅನೇಕ ಆರೋಗ್ಯ ಸಮಸ್ಯೆಗಳಿದ್ದವು, ಅವನು ತುಂಬಾ ದುರ್ಬಲನಾಗಿದ್ದ. ಜೋರ್ಡಾನ್ 2 ವರ್ಷ ವಯಸ್ಸಿನವನಾಗಿದ್ದ ಸಮಯದಲ್ಲಿ ಅವನ ತೂಕ ಕೇವಲ 16 ಪೌಂಡ್ ಆಗಿತ್ತು . ಅವನು ಬದುಕುತ್ತಾನೋ ಸಾಯುತ್ತಾನೋ ಎಂದು ಅವನ ತಂದೆಗೆ ತಿಳಿದಿರಲಿಲ್ಲ. ಆದರೆ ತನ್ನ ಹೊಸ ಮಗನಿಗೆ ಏನು ತೊಂದರೆಯಾಗದಂತೆ ಕಣ್ಣಲ್ಲಿ ಕಣ್ಣಿಟು ಸಾಕಿದ ತಂದೆ ಜೆರ್ರಿಗೆ ತನ್ನ ಈ ಮಗ ಒಂದು ದಿನ ಅಮೆರಿಕಾದ ಒಲಿಂಪಿಕ್ ನಲ್ಲಿ ಭಾಗವಹಿಸಿ ತನ್ನ ಹೆಸರನ್ನು ಬೆಳಗಿಸುತ್ತಾನೆ ಎಂದು ಕಣಸಲ್ಲೂ ಉಹಿಸಿರಲಿಲ್ಲ.
ಸಾಕು ತಂದೆಯ ಅತೀವ ಆರೈಕೆ ಮತ್ತು ಪ್ರೀತಿಯಿಂದ ತನ್ನೆಲ್ಲ ರೋಗವನ್ನು ಗೆದ್ದು ಬದುಕಿದ ಜೋರ್ಡನ್ ಏಳನೇ ವಯಸ್ಸಿನಲ್ಲಿ ಡೈವಿಂಗ್ ಕ್ಯಾಂಪ್ ಒಂದರಲ್ಲಿ ಅಭ್ಯಾಸ ಮಾಡುತ್ತಾ ಇದ್ದಾಗ ಪ್ರಸಿದ್ಧ ಡೈವಿಂಗ್ ಕೋಚ್ ರಾನ್ ಒಬ್ರಿಯಾನ್ ಅವರ ಮಗ ಟಿಮ್ ಒಬ್ರಿಯಾನ್ ಆತನ ಪ್ರತಿಭೆಯನ್ನು ಗುರುತಿಸುತ್ತಾನೆ.
ಮುಂದೆ ಉನ್ನತ ಮಟ್ಟದ ತರಬೇತಿ ಪಡೆದ ಜೋರ್ಡನ್ ತನ್ನ ಮೂರನೆ ಪ್ರಯತ್ನದಲ್ಲಿ ಅಮೆರಿಕದ ಒಲಂಪಿಕ್ ತಂಡಕ್ಕೆ ಡೈವಿಂಗ್ ವಿಭಾಗದಲ್ಲಿ ಆಯ್ಕೆಯಾಗುತ್ತಾನೆ. ಟೋಕಿಯೊದಲ್ಲಿ ನಡೆದ 2020 ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಪುರುಷರ 10 ಮೀಟರ್ಸ್ ಪ್ಲಾಟ್‌ಫಾರ್ಮ್ ಈವೆಂಟ್‌ನಲ್ಲಿ ಒಲಿಂಪಿಕ್ ತಂಡದ ಸದಸ್ಯರಾಗಿದ್ದರು, ಆದರೆ ಇದರಲ್ಲಿ ಅವರು ಒಂಬತ್ತನೇ ಸ್ಥಾನಕ್ಕೆ ತೃಪ್ತಿ ಪಡೆದರು. ಅವರು ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ ಕಾಂಬೋಡಿಯಾ ಮೂಲದ ಮೊದಲ ಡೈವರ್ ಆಗಿದ್ದಾರೆ.
ಜೆರ್ರಿ ಮತ್ತು ಜೋರ್ಡಾನ್ ಇಬ್ಬರು ಸೇರಿ ತಮ್ಮ ಗಮನಾರ್ಹ ಕುಟುಂಬ ಬಂಧದಿಂದ ಪ್ರೇರಿತವಾದ “An Orphan No More: The True Story of a Boy” ಎನ್ನುವ ಹೆಸರಿನ ಮಕ್ಕಳ ಪುಸ್ತಕ ಬರೆದಿದ್ದರೆ.