ಇದು ನಮ್ಮ ಊರು: ನದಿಯ ಬಲವಾದ ಪ್ರವಾಹದಲ್ಲಿ ನಾಯಿಯೊಂದು ಜಾರಿಬಿದ್ದು ಕೊಚ್ಚಿಕೊಂಡು ಹೋಗುತ್ತಿರುವುದನ್ನು ನೋಡಿ ತೆಲಂಗಾಣದ ನಾಗಾರ್ಕರ್ನೂಲ್ ಪೊಲೀಸ್ ಠಾಣೆಯ ಹೋಂ ಗಾರ್ಡ್ ಒಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜೆಸಿಬಿ ಯಂತ್ರದಲ್ಲಿ ಕುಳಿತು ನದಿಗೆ ಇಳಿದು ರಕ್ಷಿಸಿದ ಘಟನೆ ವರದಿಯಾಗಿದೆ. ಘಟನೆಯಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಯತಪ್ಪಿ ನದಿಯ ನೀರಿಗೆ ಬಿದ್ದಿದ್ದ ನಾಯಿ ತನ್ನ ಪ್ರಾಣ ರಕ್ಷಣಾಯೆಗಾಗಿ ಪೇಚಾಡುತ್ತಿತ್ತು. ನದಿಯ ನೀರಿನ ಪ್ರವಾಹ ಬಲವಾಗಿದ್ದ ಕಾರಣ ತನ್ನನ್ನು ರಕ್ಷಿಸಿ ಕೊಳ್ಳಲು ನಾಯಿಗೆ ಸಾಧ್ಯವಾಗಲೇ ಇಲ್ಲ. ರಕ್ಷಣೆಗಾಗಿ ಮೊರೆ ಇಡುತ್ತಲೇ ಇತ್ತು. ಇದನ್ನು ನೋಡಿ ಹೋಮ್ ಗಾರ್ಡ್ ಮುಜೀಬ್ ಜೆಸಿಬಿಯನ್ನು ಕರೆದು ಅದರ ಮೇಲೆ ಕುಳಿತು ನದಿ ನೀರಿಗೆ ಇಳಿದು ನಾಯಿಯಾ ಪ್ರಾಣವನ್ನು ರಕ್ಷಿಸಿದ್ದಾರೆ.

Leave a Reply