• ಬೇಕಾಗುವ ಸಾಮಗ್ರಿಗಳು:

ಬೆಳ್ತಿಗೆ- 1/2 ಕೆ.ಜಿ., ತೆಂಗಿನತುರಿ- 1 (ತೆಂಗಿನದ್ದು), ಸಕ್ಕರೆ- 1 ಟೀ.ಸ್ಪೂ., ಜೀರಿಗೆ- 1/4 ಟೀ.ಸ್ಪೂ., ಈರುಳ್ಳಿ2, ಬೆಳ್ಳುಳ್ಳಿ- 1 ಎಸಳು, ಈಸ್ಟ್- ಒಂದು ಚಿಟಿಕೆ, ಹಳದಿಹುಡಿ- 1/2 ಟಿ.ಸ್ಪೂ., ಅನ್ನ- ಒಂದು ಕಪ್, ತೆಂಗಿನಕಾಯಿಯ ನೀರು- ಒಂದು ತೆಂಗಿನದ್ದು, ಉಪ್ಪುರುಚಿಗೆ, ಸಣ್ಣ ಈರುಳ್ಳಿ- 10.

  • ತಯಾರಿಸುವ ವಿಧಾನ:

ಅಕ್ಕಿಯನ್ನು 3 ಗಂಟೆ ಕಾಲ ನೀರಿನಲ್ಲಿ ನೆನೆಹಾಕಿ. ಆ ಬಳಿಕ ತೊಳೆದು ನೀರು ಸೋಸಿ, ತೆಂಗಿನತುರಿ, ಜೀರಿಗೆ, ಸಕ್ಕರೆ, ನೀರುಳ್ಳಿ, ಬೆಳ್ಳುಳ್ಳಿ, ಈಸ್ಟ್, ಹಳದಿಹುಡಿ, ಅನ್ನ, ತೆಂಗಿನ ನೀರು ಸೇರಿಸಿ. ಹಿಟ್ಟು ತಯಾರಿಸಿ ತೆಗೆದಿಡಿ. ಹಿಟ್ಟಿಗೆ ರುಚಿಗೆ ಉಪ್ಪು ಸೇರಿಸಿ ಕಲಸಿ. ಒಂದು
ಪ್ಯಾನ್‍ನಲ್ಲಿ ಎಣ್ಣೆ ಸವರಿ ದೋಸೆಯಂತೆ ಹುಯ್ಯಿರಿ. ಅದರ ಮೇಲೆ ಈರುಳ್ಳಿ ಸ್ವಲ್ಪ ತುಂಡು ಹಾಕಿ, ಅಡಿಭಾಗ ಕಾದ ಬಳಿಕ ಒಂದು ಚಮಚ ತುಪ್ಪಹಾಕಿ ತಿರುಗಿಸಿ ಹಾಕಿ ಕಾಯಿಸಿ. ಸುರ್ಯಾನಿ ಅಪ್ಪಮ್ ಸವಿಯಲು ರೆಡಿ

Representational Image

Leave a Reply