ಭೋಪಾಲ್: ಮಧ್ಯಪ್ರದೇಶದ ಚತ್ರಾಪುರ ಜಿಲ್ಲೆಯ ಮಹಾರಾಜಪುರ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ದುರಂತ ಅಪಘಾತದಲ್ಲಿ 6 ಜನರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ, ಅಹಿರ್ವಾರ್ ಕುಟುಂಬದ ಸದಸ್ಯರು ಮದುವೆ ದಿಬ್ಬಣ ಮೆರವಣಿಗೆ ಮಹೋಬಾ ಜಿಲ್ಲೆಯ ಸ್ವಾಸಾ ಗ್ರಾಮದಿಂದ ಚತ್ರಾಪುರಕ್ಕೆ ಹೋಗುತ್ತಿದ್ದರು. ಕತ್ತಲೆಯಾಗಿದ್ದರಿಂದ ಚಾಲಕನಿಗೆ ಬಾವಿ ಕಾಣಿಸಲಿಲ್ಲ ಅಮ್ತ್ತು ಕಾರು ನೇರವಾಗಿ ಬಾವಿಗೆ ಧುಮುಕಿದೆ. ಕಾರಿನಲ್ಲಿ ಒಟ್ಟು 9 ಜನರಿದ್ದರು. ಅದರಲ್ಲಿ 6 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಗಾಯಗೊಂಡ ಸ್ಥಿತಿಯಲ್ಲಿ ಮೂವರನ್ನು ಬಾವಿಯಿಂದ ಸ್ಥಳಾಂತರಿಸಲಾಗಿದೆ.

ಮೃತರಲ್ಲಿ ರಾಮ್ ರತನ್ ಅಹಿರ್ವಾರ್ (35), ಕುಲದೀಪ್ (22), ಘಾನ್ಶ್ಯಾಮ್ ಅಹಿರ್ವಾರ್ (50), ರಾಜು ಕುಶ್ವಾಹ (30), ಛತ್ರಪಾಲ್ ಸಿಂಗ್ (35) ಮತ್ತು ರಮಾಧಿನ್ ಸೇರಿದ್ದಾರೆ. ಗಾಯಾಳುಗಳಲ್ಲಿ ತೇಜರಾಮ್ (28), ಚೆತ್ರಮ್ (20), ಲಕ್ಷ್ಮಣ (17) ಸೇರಿದ್ದಾರೆ.

Leave a Reply