ಪಶ್ಚಿಮ ಬಂಗಾಲ : ಮಾತುವಾ ಸಮುದಾಯದ ಜನರು ಕೂಡ ಈ ದೇಶದ ಪ್ರಜೆಗಳು ಮತ್ತು ಅವರು ಬಂಗಾಳದಲ್ಲಿ ಉಳಿಯಲು ಯಾವುದೇ ಪ್ರಮಾಣಪತ್ರವನ್ನು ತೋರಿಸಬೇಕಾಗಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಅವರು ಮಾತುವಾ ಸಮುದಾಯದ ಭದ್ರಕೋಟೆಯಾದ ಬಂಗಾಂವ್ ಪ್ರದೇಶದ ಗೋಪಾಲ್‌ನಗರದಲ್ಲಿ ಗುರುವಾರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಸಿಎಎ-ಎನ್ಆರ್ಸಿ-ಎನ್ಪಿಆರ್ಗಾಗಿ, ಅಜ್ಜಿಯರ ಹುಟ್ಟಿದ ದಿನಾಂಕವನ್ನು ನೀಡಬೇಕು. ನನ್ನ ತಾಯಿಯ ಹುಟ್ಟಿದ ದಿನಾಂಕ ನನಗೆ ತಿಳಿದಿಲ್ಲ. ಮತ್ತೆ ನಿಮಗೆ ಹೇಗೆ ತೋರಿಸಲು ಸಾಧ್ಯ ? . ಸಿಎಎ-ಎನ್‌ಆರ್‌ಸಿ-ಎನ್‌ಪಿಆರ್ ಅನ್ನು ಬಂಗಾಳದಲ್ಲಿ ಜಾರಿಗೆ ತರಲು ನಾವು ಅನುಮತಿಸುವುದಿಲ್ಲ ಎಂದವರು ಹೇಳಿದರು.

ಮಾತುವ ಸಮುದಾಯದ ಮುಖಂಡರಾದ ಗುರುಚಂದ್ ಠಾಕೂರ್ ಮತ್ತು ಹರಿಚಂದ್ ಠಾಕೂರ್ ಅವರ ಜನ್ಮ ವಾರ್ಷಿಕೋತ್ಸವ ದಿನದಂದು ಸರ್ಕಾರಿ ರಜೆಯನ್ನು ಘೋಷಿಸಿದರು. ನಾವು ಹಿಂದೂ ಧರ್ಮದ ಬಗ್ಗೆ ಏನನ್ನೂ ಕಲಿಯಬೇಕಾದರೆ ನಾವು ಸ್ವಾಮಿ ವಿವೇಕಾನಂದರಿಂದ ಕಲಿಯುತ್ತೇವೆ ಎಂದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬಂಗಾಂವ್ ಪ್ರದೇಶದ ಗೋಪಾಲ್‌ನಗರದಲ್ಲಿ ಗುರುವಾರ ನಡೆದ ಸಭೆಯಲ್ಲಿ ವಿರುದ್ಧವಾಗಿ ಕೆಲವರು ಪ್ಲ್ಯಾಕಾರ್ಡ್ ತೋರಿಸಿದರು.

ಎಲ್ಲರನ್ನೂ ಒಂದೇ ಸಮಯದಲ್ಲಿ ತೃಪ್ತಿ ಪಡಿಸಲು ಸಾಧ್ಯವಿಲ್ಲ, ಕೆಲವೊಮ್ಮೆ ನಾನು ಈ ಕುರ್ಚಿಯಲ್ಲಿ ಇರಬಾರದು ಎಂದು ನಾನು ಭಾವಿಸುತ್ತೇನೆ ಏಕೆಂದರೆ ನಾನು ಎಲ್ಲವನ್ನೂ ಜನರಿಗೆ ನೀಡಿದ್ದೇನೆ, ಆದರೂ ಕೆಲವು ಜನರು ತೃಪ್ತರಾಗಿಲ್ಲ, ರಾಜ್ಯದ 10 ಕೋಟಿ ಜನರಲ್ಲಿ, ನಾನು 9.5 ಕೋಟಿ ಜನರಿಗೆ ಏನಾದರೂ ಮಾಡಿದ್ದೇನೆ. ರಾಜಕೀಯ ಪಕ್ಷವು ಸಂವಿಧಾನವನ್ನು ದುರುಪಯೋಗಪಡಿಸುತ್ತಿದೆ. ಸಂವಿಧಾನವನ್ನು ರಕ್ಷಿಸಲು ನಾವೆಲ್ಲರೂ ಒಟ್ಟಾಗಿ ಪ್ರಾರ್ಥಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿಗೆ ವಿರುದ್ಧ ವಾಗ್ದಾಳಿ ನಡೆಸಿದರು.

Leave a Reply