ತಿರುವನಂತಪುರಂ: ಕೇರಳದಲ್ಲಿ ಕಟ್ಟಡ ಕಾರ್ಮಿಕನ ಮಗಳು ಅಶ್ವತಿ ಎಸ್ 481 ನೇ ರ್ಯಾಂಕ್ ಸಾಧಿಸುವ ಮೂಲಕ ಸಿವಿಲ್ ಸರ್ವಿಸಸ್ ಎಕ್ಸಾಮಿನೇಷನ್- 2020 ಅನ್ನು ತೇರ್ಗಡೆ ಹೊಂದಿದ್ದಾರೆ.
ಇದು ನನ್ನ ನಾಲ್ಕನೇ ಪ್ರಯತ್ನವಾಗಿದ್ದು ಸತತ ಪರಿಶ್ರಮ ಮತ್ತು ಬರವಣಿಗೆಯ ಅಭ್ಯಾಸದಿಂದಾಗಿ ವಿಷಯಗಳ ಕಡೆಗೆ ಗಮನ ಕೇಂದ್ರೀಕರಿಸಿದೆ. ಆದ್ದರಿಂದ ವಿಷಯಗಳನ್ನೂ ಚೆನ್ನಾಗಿ ಪ್ರಸ್ತುತ ಪಡಿಸಲು ಸಾಧ್ಯವಾಯಿತು ಎಂದು ANI ಯೊಂದಿಗೆ ಮಾತನಾಡುತ್ತಾ, ಅಶ್ವಥಿ ಹೇಳಿದರು
ಆಕೆಯ ತಂದೆ ಕಟ್ಟಡ ಕಾರ್ಮಿಕ. “ಕಷ್ಟದ ಸಂದರ್ಭಗಳಲ್ಲಿ ಮಗಳು ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವುದು ನನಗೆ ತುಂಬಾ ಸಂತೋಷ ನೀಡಿದೆ. ಅವಳು ಕಲಿಕೆಯಲ್ಲಿ ತುಂಬಾ ಮುಂದೆ ಇದ್ದಳು” ಎಂದು ಆಕೆಯ ತಂದೆ ಪ್ರೇಮಕುಮಾರ್ ಹೇಳಿದರು.
ಇದಕ್ಕೂ ಮುನ್ನ ಶುಕ್ರವಾರ, ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಘೋಷಿಸಿತು. 761 ಅಭ್ಯರ್ಥಿಗಳನ್ನು ನೇಮಕಾತಿಗೆ ಶಿಫಾರಸು ಮಾಡಲಾಗಿದೆ. ಬಿಹಾರದ ಕತಿಹಾರ್ ನ ಶುಭಂ ಕುಮಾರ್ ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ