ಸರ್ಕಾರ ‘ಮಧ್ಯಾಹ್ನದ ಊಟ’ ಅಥವಾ ಬಿಸಿಯೂಟ ಯೋಜನೆಯನ್ನು ‘ಪಿಎಂ ಪೋಷಣ’ ಯೋಜನೆ ಎಂದು ಮರುನಾಮಕರಣ ಮಾಡಿದೆ.

ಕೇಂದ್ರ ಸರ್ಕಾರವು ‘ ಬಿಸಿಯೂಟ ‘ ಯೋಜನೆಯ ಹೆಸರನ್ನು ‘PM ಪೋಷಣ್’ ಯೋಜನೆ ಎಂದು ಬದಲಿಸಿದೆ. ಈ ಯೋಜನೆಯು 5 ವರ್ಷಗಳವರೆಗೆ ನಡೆಯುತ್ತದೆ. ಇದಕ್ಕಾಗಿ 1.31 ಲಕ್ಷ ಕೋಟಿ ಖರ್ಚು ಮಾಡಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.

ಈ ಯೋಜನೆಯಡಿಯಲ್ಲಿ 11.2 ಲಕ್ಷಕ್ಕೂ ಹೆಚ್ಚು ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಊಟ ನೀಡಲಾಗುವುದು. ಈ ಯೋಜನೆಯನ್ನು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ನಡೆಸಲಾಗುವುದು. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಗಿದೆ.

Leave a Reply