ಯುಪಿಎಸ್ಸಿಯಲ್ಲಿ ಯಶಸ್ಸನ್ನು ಸಾಧಿಸಿದ ಅಲ್ತಾಫ್ ಶೇಖ್ ರವರು ತುಂಬಾ ಬಡ ಕುಟುಂಬದಲ್ಲಿ ಜನಸಿದವರು. ಅವರ ಸಾಧನೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ. ಅವರ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಶೋಚನೀಯವಾಗಿತ್ತು. ಶಾಲೆಯ ನಂತರ ಅಲ್ತಾಫ್ ತನ್ನ ತಂದೆಯೊಂದಿಗೆ ಚಹಾ ಮತ್ತು ಪಕೋಡಗಳನ್ನು ಮಾರಲು ಹೋಗುತ್ತಿದ್ದರು.

ಬಡತನ ಜೀವನ ಕಷ್ಟಕರವಾಗಿದ್ದರೂ ಅಲ್ತಾಫ್ ತನ್ನ ಪ್ರತಿಭೆಯ ಬಲದಿಂದ ಇಸ್ಲಾಂಪುರದಲ್ಲಿ ನವೋದಯ ವಿದ್ಯಾಲಯದಲ್ಲಿ (ಸರ್ಕಾರಿ ವಸತಿ ಶಾಲೆ, 6-12 ರವರೆಗೆ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ) ಪ್ರವೇಶ ಪಡೆಯಲು ಸಾಧ್ಯವಾಯಿತು. ನವೋದಯದಿಂದ 12 ನೇ ತೇರ್ಗಡೆಯಾದ ನಂತರ, ಅಲ್ತಾಫ್ ಆಹಾರ ತಂತ್ರಜ್ಞಾನದಲ್ಲಿ ಬಿಟೆಕ್ ಮುಗಿಸಿದರು ಮತ್ತು ನಂತರ ಯುಪಿಎಸ್‌ಸಿಗೆ ತಯಾರಿ ಆರಂಭಿಸಿದರು.

2015 ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಲ್ಲಿ ಯಶಸ್ವಿಯಾದರೂ ಅವರು ತಮ್ಮ ಶ್ರೇಣಿಯಲ್ಲಿ ಸಂತೃಪ್ತರಾಗಿರಲಿಲ್ಲ. ಕುಟುಂಬದ ಆರ್ಥಿಕ ಸ್ಥಿತಿಯನ್ನು ನೋಡಿ, ಅವರು ಕೆಲಸಕ್ಕೆ ಸೇರಿದರು. ಪ್ರಸ್ತುತ, ಅಲ್ತಾಫ್ ಅವರನ್ನು ಗುಪ್ತಚರ ಅಧಿಕಾರಿಯಾಗಿ ನೇಮಿಸಲಾಗಿದೆ. ಆದರೂ ಅವರು ತನ್ನ ಕನಸನ್ನು ಕೈಬಿಡಲಿಲ್ಲ. ಪರೀಕ್ಷೆಗಾಗಿ ತಯಾರಿ ಮಾಡುತ್ತಲೇ ಇದ್ದರು. ಈ ಬಾರಿ ಅವರು 545 ನೇ ರ್ಯಾಂಕ್ ಪಡೆದಿದ್ದಾರೆ. ತನ್ನ ಕನಸನ್ನು ನನಸಾಗಿಸಿದ್ದಾರೆ.

Leave a Reply