ಕೇರಳದ ಮುಸ್ಲಿಂ ಮಹಿಳೆಯೋರ್ವರು ಶ್ರೀಕೃಷ್ಟನ ಪೇಂಟಿಂಗ್ ಮಾಡಿದ್ದು ತುಂಬಾ ಜನರನ್ನು ಆಕರ್ಷಿಸಿದೆ. ದಿ ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕೋಯಿಕ್ಕೋಡ್ ನ 28 ವರ್ಷದ ಮುಸ್ಲಿಂ ಮಹಿಳೆ ಜಸ್ನಾ ಸಲೀಂ ಮಾಡಿದ ಬಾಲ ಗೋಪಾಲ್ ಅವರ ವರ್ಣಚಿತ್ರವನ್ನು ದೇವಸ್ಥಾನದಲ್ಲಿ ಸ್ಥಾಪಿಸಲಾಗಿದೆ ಈ ಪೇಂಟಿಂಗ್ ಮಾಡಿದ  ಜಸ್ನಾ ಇವರು ಇಬ್ಬರು ಮಕ್ಕಳ ತಾಯಿ . ಮನೆಯಲ್ಲಿ ಜಸ್ನಾರನ್ನು ಪ್ರೀತಿಯಿಂದ ‘ಕನ್ನ’ (ಕೃಷ್ಣನ ಹೆಸರು. ಚಿಕ್ಕ ಮಗುವಿಗೆ ಬಳಸುವ ಹೆಸರು) ಎಂದು ಕರೆಯಲಾಗುತ್ತಿತ್ತು.

ಜಸ್ನಾ ಈಗಾಗಲೇ ತನ್ನ ಚಿತ್ರಗಳನ್ನು ಹಲವು ದೇವಸ್ಥಾನಗಳಿಗೆ ನೀಡಿದ್ದಾರೆ. ಗುರುವಾಯೂರು ಶ್ರೀ ಕೃಷ್ಣ ದೇವಸ್ಥಾನ ಮತ್ತು ಕೊಯಿಲಂಡಿಯ ದೇವಸ್ಥಾನಗಳಲ್ಲಿ ಜಸ್ನಾ ತನ್ನ ವರ್ಣ ಚಿತ್ರಗಳನ್ನು ಪ್ರಸ್ತುತಪಡಿಸಿದರು.

Jasna Salim Krishna Painting
The New Indian Express

ಬೆಳಗಿನ ಪ್ರಾರ್ಥನೆ ಸಲ್ಲಿಸಿದ ನಂತರ ದೇವಸ್ಥಾನವನ್ನು ತಲುಪಿದ ಜಸ್ನಾ, “ಉಲನಾಡು ದೇವಸ್ಥಾನದ ಅಧಿಕಾರಿಗಳ ಸಹಕಾರದಿಂದ ನನಗೆ ತುಂಬಾ ಸಂತೋಷವಾಗಿದೆ ” ಎಂದು ಹೇಳಿದರು. ಗರ್ಭಾವಸ್ಥೆಯಲ್ಲಿ ಜಸ್ನಾ ಕುಸಿದುಬಿದ್ದು ಚೇತರಿಸಿಕೊಳ್ಳುತ್ತಿದ್ದರು. ಈ ಸಮಯದಲ್ಲಿ ಜಸ್ನಾ ಚಿತ್ರಕಲೆ ಆರಂಭಿಸಿದರು ಮತ್ತು ಕ್ರಮೇಣ ಹವ್ಯಾಸವು ಒಂದು ಉತ್ಸಾಹವಾಯಿತು.

“ನನ್ನ ಬಾಲ್ಯದಲ್ಲಿ ನನ್ನ ಪೋಷಕರು ಮತ್ತು ಸಂಬಂಧಿಕರು ನನ್ನನ್ನು ಕಣ್ಣಾ ಎಂದು ಕರೆಯುತ್ತಿದ್ದರು. ನಾನು ಪತ್ರಿಕೆಯಲ್ಲಿದ್ದ ಶ್ರೀಕೃಷ್ಣನ ಮೂರ್ತಿಯನ್ನು ನೋಡಿದಾಗ ನಾನು ಹಾಸಿಗೆಯಲ್ಲಿದ್ದೆ, ನನಗೆ ಬಣ್ಣ ಹಚ್ಚುವ ಬಲವಾದ ಆಸೆ ಬಂತು ಹಾಗೂ ಅದು ಈಗ ಪರಿಪೂರ್ಣವಾಯಿತು” ಏನು ಜಸ್ನಾ ತನ್ನ ಚಿತ್ರಕಲೆಯ ಬಗ್ಗೆ ವಿವರಿಸಿದರು.

Leave a Reply