ಯೇ ದೌಲತ್ ಭೀ ಲೇಲೋ ಯೇ ಶುಹ್ರತ್ ಭೀ ಲೇಲೋ
ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ
ಮಗರ್ ಮುಜ್ಹ್ ಕೊ ಲೌಟಾದೊ ವೊ ಬಚ್’ಪನ್ ಕಾ ಸಾವನ್
ವೊ ಕಾಗಝ್ ಕೀ ಕಶ್’ತೀ ವೊ ಬಾರಿಶ್ ಕಾ ಪಾನೀ

ಮೊಹಲ್ಲೇ ಕೀ ಸಬ್ ಸೇ ನಿಶಾನೀ ಪುರಾನೀ
ವೊ ಬುಢಿಯಾ ಜಿಸೇ ಬಚ್ಚೇ ಕಹ್ತೇ ಥೇ ನಾನೀ
ವೊ ನಾನೀ ಕೀ ಬಾತೋಂ ಮೇ ಪರಿಯೋಂಕಾ ಢೇರಾ
ವೊ ಚಹ್’ರೇ ಕೀ ಜ್ಹುರಿಯೋಂ ಮೇ ಸದಿಯೋಂಕಾ ಪ್ಹೇರಾ
ಭುಲಾಯೇ ನಹೀ ಭೂಲ್ ಸಕ್ತಾ ಹೈ ಕೋಯೀ
ವೊ ಛೋಟೀ ಸೀ ರಾತೇಂ ವೊ ಲಂಬೀ ಕಹಾನೀ

ಖಡೀ ಧೂಪ್ ಮೇ ಅಪ್ ನೇ ಘರ್ ಸೇ ನಿಕಲ್ನಾ
ವೊ ಚಿಡಿಯಾಂ ವೊ ಬುಲ್’ಬುಲ್ ವೊ ವೊ ತಿತ್ಲೀ ಪಕಡ್ನಾ
ವೊ ಗುಡಿಯೋಂಕೀ ಶಾದೀ ಮೇ ಲಡ್ನಾ ಜ್ಹಗಡ್ನಾ
ವೊ ಜ್ಹೋಲೋಂ ಸೆ ಗಿರ್ನಾ ವೊ ಗಿರ್ತೇ ಸಂಭಲ್ನಾ
ವೊ ಟೂಟೀ ಹುವೀ ಚೂಡಿಯೋಂಕೀ ನಿಶಾನೀ
ವೊ ಪೀತಲ್ ಕೆ ಛಾ ಛಾವೂಂ ಕೆ ಪ್ಯಾರೇ ಸೆ ತುಹ್’ಫೇ

ಕಭೀ ರೇತ್ ಕೇ ಊಂಚೇ ಟೀಲೋಂಪೆ ಜಾನಾ
ಘರೊಂದೇ ಬನಾನಾ ಬನಾ ಕೇ ಮಿಟಾನಾ
ವೊ ಮಾಸೂಮ್ ಚಾಹತ್ ಕೀ ತಸ್ವೀರ್ ಅಪ್ನೀ
ವೊ ಖ್ವಾಬೋಂ ಖಿಲೋನೋಂ ಕೀ ಜಾಗೀರ್ ಅಪ್ನೀ
ನ ದುನಿಯಾ ಕಾ ಘಮ್ ಥಾ ನ ರಿಶ್ತೋಂ ಕಾ ಬಂಧನ್

ಬಡೀ ಖೂಬ್ ಸೂರತ್ ಥೀ ವೊ ಝಿಂದಗಾನೀ
ಯೇ ದೌಲತ್ ಭೀ ಲೇಲೋ ಯೇ ಶುಹ್ರತ್ ಭೀ ಲೇಲೋ
ಭಲೇ ಛೀನ್ ಲೋ ಮುಜ್ಹ್ ಸೇ ಮೇರೀ ಜವಾನೀ
ಮಗರ್ ಮುಜ್ಹ್ ಕೊ ಲೌಟಾದೊ ವೊ ಬಚ್’ಪನ್ ಕಾ ಸಾವನ್
ವೊ ಕಾಗಝ್ ಕೀ ಕಶ್’ತೀ ವೊ ಬಾರಿಶ್ ಕಾ ಪಾನೀ

~~ ಸುದರ್ಶನ್ ಫಾಕಿರ್


ಈ ಸಿರಿಯನ್ನು ತೆಗೆದುಕೊಳ್ಳಿ ಸಿದ್ಧಿಯನ್ನೂ ತೆಗೆದುಕೊಳ್ಳಿ
ಬೇಕೆಂದರೆ ನನ್ನ ಈ ಹರಯವನ್ನೂ ಕಸಿದುಕೊಳ್ಳಿ
ಆದರೆನಗೆ ಹಿಂದಿರುಗಿಸಿ ನನ್ನ ಬಾಲ್ಯದಾ ಶ್ರಾವಣ
ಆ ಕಾಗದದ ಹಡಗನ್ನು, ಆ ಮಳೆಯ ತೋರಣ

ಊರಿನಾ ಆ ಅತಿ ಹಳೆಯಾ ನಿಶಾನಿ
ಪೋರ ಪೋರಿಯರ ಮುದ್ದಿನಾ ನಾನಿ
ಅಜ್ಜಿಯಾ ನುಡಿಯಲ್ಲಿ ಅಪ್ಸರೆಯರ ಡೇರೆ
ಮುಖ ನೆರೆದ ನಿರಿಯಲ್ಲಿ ಶತಮಾನದ ಪಹರೆ
ಮರೆಯಲಾಗದೆಂದೆಂದೂ ಸುಮಧುರ ನೆನಪುಗಳು
ಸರಿದು ಬಿಡುವ ಪುಟ್ಟ ರಾತ್ರಿ, ಉದ್ದುದ್ದ ಕಥೆಗಳು

ಬಿಸಿಲ ತಾಪ ಲೆಕ್ಕಿಸದೆ ಮನೆಯಿಂದ ಹೊರಡೋದು
ಗುಬ್ಬಿಗಳನು ಬುಲ್ ಬುಲನ್ನು ಚಿಟ್ಟೆಗಳನು ಹಿಡಿಯೋದು
ಗೊಂಬೆಯಾ ಮದುವೇಲಿ ಬಡಿಯೋದು ಹೊಡಿಯೋದು
ಜೋಕಾಲಿ ತೂಗಿ ಜೀಕಿ ಬೀಳೋದು ಏಳೋದು
ಹಿತ್ತಾಳಿ ಬಿಂಬದಾ ಚೆಲುವಿನಾ ಕಾಣಿಕೆ
ಒಡೆದು ಹೋದ ಕಂಕಣವೇ ಒಲವಿನಾ ಸ್ಮರಣಿಕೆ

ಎತ್ತರದ ಮರಳದಿನ್ನೆ ಏರೋದು ಜಿಗಿಯೋದು
ಮರಳ ಮನೆ ಕಟ್ಟೋದು, ಕಟ್ಟಿ ಕಟ್ಟಿ ಅಳಿಸೋದು
ಮುಗ್ಧ ಪ್ರೇಮದಾ ನಮ್ಮಯ ಸಾಕಾರ ರೂಪ
ಆಟಿಕೆ ಕನಸುಗಳೇ ನಮಗೆ ನಿಧಿಯಾ ಸ್ವರೂಪ
ಲೋಕವ್ಯಥೆಯಿಲ್ಲ, ನೆಂಟಸ್ತಿಕೆಗೆ ನಿಬಂಧನೆಯಿಲ್ಲ
ಎಷ್ಟು ಸುಂದರವಾಗಿತ್ತು ಆ ನಮ್ಮ ಬದುಕು ನಲ್ಲ

ಈ ಸಿರಿಯನ್ನು ತೆಗೆದುಕೊಳ್ಳಿ ಸಿದ್ಧಿಯನ್ನೂ ತೆಗೆದುಕೊಳ್ಳಿ
ಬೇಕೆಂದರೆ ನನ್ನ ಈ ಹರಯವನ್ನೂ ಕಸಿದುಕೊಳ್ಳಿ
ಆದರೆನಗೆ ಹಿಂದಿರುಗಿಸಿ ನನ್ನ ಬಾಲ್ಯದಾ ಶ್ರಾವಣ
ಆ ಕಾಗದದ ಹಡಗನ್ನು, ಆ ಮಳೆಯ ತೋರಣ

~~ ಈಜಾಝುದ್ದೀನ್ ಉಮರಿ

Leave a Reply