ಭೋಪಾಲ್: ಆನ್ ಲೈನ್ ನಲ್ಲಿ ಫೇಮಸ್ ಆಗಲು ಜನರು ಏನೆಲ್ಲಾ ಕಸರತ್ತು ಮಾಡುತ್ತಾರೆ. ಎಷ್ಟೊಂದು ನೀಚ ವಾಗಿ ವರ್ತಿಸುತ್ತಾರೆ ಅನ್ನೊದಕ್ಕೊಂದು ಸ್ಪಷ್ಟ ಉದಾಹರಣೆ ಇಲ್ಲಿದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಒಂದರಲ್ಲಿ ಯುವಕನೊಬ್ಬ ವಿಡಿಯೋ ಮಾಡುವ ಸಲುವಾಗಿ ಬೀದಿ ನಾಯಿಯೊಂದನ್ನು ಹಿಡಿದು ತುಂಬಿ ಹರಿಯುತ್ತಿರುವ ನದಿ ನೀರಿಗೆ ಎಸೆಯುತ್ತಿರುವುದು ಕಂಡು ಬಂದಿದೆ. ಈ ಘಟನೆ ಮಧ್ಯ ಪ್ರದೇಶದ ಭೋಪಾಲ್ ನದ್ದು ಎಂದು ಹೇಳಲಾಗುತ್ತಿದ್ದು, ನಾಯಿ ಅಸಹಾಯಕವಾಗಿ ಕಿರುಚಾಡುತ್ತಿರುವಾಗ ಯುವಕ ಕ್ಯಾಮರಾ ಕಡೆ ನೋಡಿ ಮುಗುಳ್ನಗುತ್ತ ನಾಯಿಯನ್ನು ನೀರಿಗೆ ಎಸೆಯುತ್ತಾನೆ. ವಿಡಿಯೋದ ಹಿನ್ನೆಲೆಯಲ್ಲಿ ಈ ಸಂದರ್ಭದಲ್ಲಿ ತುಂಬಾ ಗೊಂದಲದ ಸಂಗತಿಯೆಂದರೆ ಅವನು ಕ್ಯಾಮರಾಕ್ಕಾಗಿ ಕಿರುನಗೆ ಬೀರುತ್ತಾನೆ. ವೀಡಿಯೊದ ಹಿನ್ನೆಲೆಯಲ್ಲಿ ಹಿಂದಿ ಚಲನಚಿತ್ರ ಕಮಾಂಡೋ 3 ರ ಹಾಡು ಕೇಳುತ್ತಿದೆ.

ವಿಡಿಯೋ ಚಿತ್ರೀಕರಿಸಿದವರು ಯಾರು ಮತ್ತು ನಾಯಿ ಸತ್ತಿದೆಯ ಅಥವಾ ಜೀವಂತವಾಗಿದೆಯೇ ಎಂಬುದು ತಿಳಿದು ಬಂದಿಲ್ಲ. ವಿಡಿಯೋ ಹಳೆಯದು ಎಂದು ಆರೋಪಿಗಳ ಸ್ನೇಹಿತರು ಪೊಲೀಸರಿಗೆ ತಿಳಿಸಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವರದಿಯ ಪ್ರಕಾರ ವಿಡಿಯೋದಲ್ಲಿರುವ ವ್ಯಕ್ತಿಯನ್ನು ಭೋಪಾಲ್ ನಗರದ ತಿಲಾ ಜಮಾಲ್ಪುರಾ ಪ್ರದೇಶದ ನಿವಾಸಿ ಎಂದು ಗುರುತಿಸಲಾಗಿದ್ದು ಆತ ವಿಡಿಯೋ ವೈರಲ್ ಆದ ಬಳಿಕ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಪರಿಚಿತ ಆರೋಪಿಯ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply