• ಬೇಕಾಗುವ ಸಾಮಗ್ರಿಗಳು:

ಸಣ್ಣದಾಗಿ ಕತ್ತರಿಸಿದ ಕ್ಯಾಬೇಜ್- 1 ಕಪ್,
ಸಣ್ಣದಾಗಿ ಕತ್ತರಿಸಿ ಹಸಿಮೆಣಸು- 2,
ಕತ್ತರಿಸಿದ ಈರುಳ್ಳಿ- 1,
ಕೊತ್ತಂಬರಿ ಸೊಪ್ಪು ಕತ್ತರಿಸಿದ್ದು- 2 ಸ್ಪೂ,
ಉದ್ದಿನ ಬೇಳೆ ಅರೆದದ್ದು- 2 ಕಪ್,
ಎಣ್ಣೆ ಮತ್ತು ಉಪ್ಪು- ಅಗತ್ಯಕ್ಕೆ,

  • ಮಾಡುವ ವಿಧಾನ:

ಒಂದು ಪಾತ್ರೆಯಲ್ಲಿ ಕ್ಯಾಬೇಜ್,ಹಸಿಮೆಣಸು, ಕೊತ್ತಂಬರಿ ಸೊಪ್ಪು, ನೀರುಳ್ಳಿ, ಅರೆದ ಉದ್ದಿನಬೇಳೆ ಉಪ್ಪು…ಎಲ್ಲವನ್ನು ಸೇರಿಸಿ ಅದಕ್ಕೆ ಸ್ವಲ್ಪ ನೀರು ಸೇರಿಸಿ ಹಿಟ್ಟು ತಯಾರಿಸಿ. ಕೈಗೆ ಸ್ವಲ್ಪ ಎಣ್ಣೆ ಸವರಿ, ಸ್ವಲ್ಪ ಹಿಟ್ಟು ತೆಗೆದು ವಡೆಯ ಆಕೃತಿಯಲ್ಲಿ ಮಾಡಿ, ಮಧ್ಯೆ ಒಂದು ತೂತು ಮಾಡಿ, ಎಣ್ಣೆಗೆ ಬಿಡಿರಿ. ಗರಿಗರಿ ಕ್ಯಾಬೇಜ್ ವಡೆ ರೆಡಿ.

Leave a Reply