1. ಮನೆ ಮತ್ತು ಶಾಲೆಯ ವಾತಾವರಣವನ್ನು ಪರಸ್ಪರ ಪ್ರೀತಿ, ಅನುಕಂಪ, ಸದ್ಭಾವನೆ, ಸಹವಾಸ, ಸಹಕಾರ, ಐಕ್ಯತೆ ಸಮಾನತೆಯ ಭಾವನೆ ಬೆಳೆಯುವಂತೆ ರೂಪಿಸಬೇಕು. ಅದೇ ವೇಳೆ ಕೋಪೋದ್ರಿಕ್ತತೆ, ಅಣಕ, ವ್ಯಂಗ್ಯ, ಕೆಟ್ಟ ಗುಮಾನಿ, ಮನಸ್ತಾಪ, ಗದರಿಕೆ, ಜಗಳ, ಅಡ್ಡ ಹೆಸರು ಹಾಕುವುದು, ಚೇಷ್ಟೆ ಮಾಡುವುದು, ಚುಡಾಯಿಸುವುದು ಮತ್ತು ಸತಾಯಿಸುವುದರ ದುಷ್ಪರಿಣಾಮಗಳನ್ನು ತಿಳಿಸುತ್ತಾ ಅವುಗಳನ್ನು ತಡೆಯುವ ಪ್ರಯತ್ನ ಮಾಡಬೇಕು.
2. ಮಕ್ಕಳ ಬಾಲಿಶ ತಪ್ಪುಗಳನ್ನು ಆದಷ್ಟು ಕ್ಷಮಿಸಬೇಕು ಮತ್ತು ಕಡೆಗಣಿಸಬೇಕು. ಹಾಗೆಯೇ ತಮ್ಮ ತಪ್ಪೋಷ್ಟಿಕೊಳ್ಳಲು, ಅದಕ್ಕಾಗಿ ಕ್ಷಮೆ ಯಾಚಿಸಲು ಮಕ್ಕಳನ್ನು ಪ್ರೇರೇಪಿಸುತ್ತಲೂ ಇರಬೇಕು. ಹೆಚ್ಚಿನ ವೇಳೆ ತಮ್ಮ ತಪ್ಪನ್ನು ಒಪ್ಪಿ ಕೊಳ್ಳಲು ಸಿದ್ದರಾಗದಿರುವುದರಿಂದ ಮಾತಿಗೆ ಮಾತು ಬೆಳೆದು ಕೋಪ, ಮನಸ್ತಾಪಕ್ಕೆ ಕಾರಣವಾಗುತ್ತದೆ. ಹಾಗಾಗಿ ತಪ್ಪೋಗೆ ಮತ್ತು ತಪ್ಪಿಗೆ ಕ್ಷಮೆ ಕೇಳುವುದನ್ನು ಬಾಲ್ಯದಲ್ಲಿಯೇ ಅಭ್ಯಾಸ ಮಾಡಿಸಿದರೆ ಅದಕ್ಕೆ ಆಸ್ಪದವೇ ಇರುವುದಿಲ್ಲ

3. ಮಗು ಯಾರ ಮೇಲಾದರೂ ಕೋಪ- ಅಸಮಾಧಾನಗೊಂಡಿದ್ದರೆ ಆ ಸಮಯದಲ್ಲಿ ಬುದ್ದಿಮಾತು ಅಥವಾ ಗದರಿಕೆಯು ಫಲ ನೀಡುವುದರ ಬದಲು ಸಾಮಾನ್ಯವಾಗಿ ತೀವ್ರ ಪ್ರತಿರೋಧಕ್ಕೆಡೆ ಮಾಡುತ್ತದೆ ಮತ್ತು ಅದರ ಪರಿಣಾಮವು ಅಪಾಯಕಾರಿಯಾಗುವ ಸಾಧ್ಯತೆ ಇದೆ. ಹಾಗಾಗಿ ಕೋಪ ತಣಿಯುವ ವರೆಗೆ ಮಗುವನ್ನು ಅದರ ಪಾಡಿಗೆ ಬಿಟ್ಟು ಬಿಡಬೇಕು. ಅದೇ ವೇಳೆ, ಮಗುವಿನ ಮುಂದೆ ಹಾನಿಯುಂಟು ಮಾಡುವ ವಸ್ತುವೇನಾದರೂ ಇದ್ದರೆ ಅದನ್ನು ಅಲ್ಲಿಂದ ತೆಗೆದು ಬಿಡಬೇಕು. ಹೀಗೆ ಮಾಡುವುದರಿಂದಲೂ ಮಗುವಿನ ಕೋಪ ಕಡಿಮೆಯಾಗಲು ಸಾಧ್ಯವಿದೆ. ಕೋಪ ತಣಿದ ಮೇಲೆ ಬುದ್ದಿ ಮಾತು ಹೇಳಿದರೆ ಅದು ಪರಿಣಾಮಕಾರಿಯಾಗುತ್ತದೆ.
4. ಕುಸ್ತಿ ಮತ್ತಿತರ ಸ್ಪರ್ಧೆಗಳನ್ನೇರ್ಪಡಿಸಬೇಕು. ಇದರಿಂದ ಪ್ರಸ್ತುತ ಸ್ವಭಾವಕ್ಕೆ ಈ ಮೂಲಕ ಸಮಾಧಾನ ಒದಗಿಸುವ ಅವಕಾಶ ಲಭಿಸುತ್ತದೆ. ಇದರಿಂದ ಮಕ್ಕಳು ಹೊಡೆದಾಟ, ಗಲಾಟೆಗಳಿಂದ ದೂರವುಳಿಯುತ್ತಾರೆ ಹಾಗೂ ಈ ಸ್ವಭಾವ ಅಳಿದು ಹೋಗುವುದೂ ಇಲ್ಲ

5. ಇಬ್ಬರು ಮಕ್ಕಳು ಹೊಡೆದಾಡುತ್ತಿದ್ದರೆ, ಚಾಣಾಕ್ಷತೆಯಿಂದ ತಪ್ಪಿತಸ್ಥ ನನ್ನು ಕಂಡು ಹಿಡಿಯಬೇಕು. ತಪ್ಪೆಸಗಿದವನನ್ನು ಕ್ಷಮೆ ಯಾಚಿಸಲು ಪ್ರೇರೇಪಿಸಬೇಕು.
6. ಜಗಳಗಂಟಿ ತುಂಟ ಹುಡುಗರನ್ನು ದುರ್ಬಲ ಹುಡುಗರ ಜತೆಗಾರರನ್ನಾಗಿ ಮಾಡಬೇಕು. ಇದರಿಂದ ಅವರ ಸ್ವಭಾವದ ಹಕ್ಕನ್ನೂ ತೀರಿಸಿದಂತಾಗುತ್ತದೆ ಮತ್ತು ಅವರಲ್ಲಿ ದುರ್ಬಲರಿಗೆ ಸಹಾಯ ಮಾಡುವ ಗುಣವೂ ಬೆಳೆಯುತ್ತದೆ.
7. ಧಾಂದಲೆ, ಅಕ್ರಮ, ಹಿಂಸೆ-ಮರ್ದನ, ಹಕ್ಕುಚ್ಯುತಿ, ಮಾನಹಾನಿ ಮತ್ತು ಕೆಡುಕು ಇತ್ಯಾದಿಗಳ ಬಗ್ಗೆ ತಿರಸ್ಕಾರ ಭಾವವನ್ನು ಪ್ರಕಟಿಸಬೇಕು. ಅವುಗಳ ನಿವಾರಣೆಯಲ್ಲಿ ಸಕ್ರಿಯತೆಯನ್ನು ತೋರಬೇಕು. ಮಕ್ಕಳೂ ಆ ಸಂಗತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರೆ, ಅವರನ್ನು ಗದರಿಸಬಾರದು; ಬದಲಿಗೆ ಅವುಗಳನ್ನು ದಿಟ್ಟವಾಗಿ ಎದುರಿಸುವ ಮತ್ತು ನಿವಾರಿಸುವ ಉಪಾಯಗಳನ್ನು ತಿಳಿ ಹೇಳಬೇಕು.
8. ತನ್ನ ಕೊರತೆ-ತಪ್ಪು ಮತ್ತು ದೌರ್ಬಲ್ಯಗಳ ವಿರುದ್ಧ ಹೋರಾಡಲು ಹಾಗೂ ಅವುಗಳ ಮೇಲೆ ನಿಯಂತ್ರಣ ಹೊಂದಲು ವಿವಿಧ ವಠ್ಯ ವಿಷಯಗಳಿಗೆ ಸಂಬಂಧಿಸಿದ ಕಿಷ್ಟಾಕ್ಷರ ಸಮಸ್ಯೆಗಳನ್ನು ನೀಡಿ ಅವುಗಳನ್ನು ಪರಿಹರಿಸುವಂತೆ ಪ್ರೇರೇಪಿಸಬೇಕು. ಅಂತೆಯೇ ಜೀವನದ ಸಂಕಷ್ಟಗಳನ್ನು ದಿಟ್ಟವಾಗಿ ಎದುರಿಸಲು ಉಪದೇಶಿಸುತ್ತಾ ಇರಬೇಕು.

9. ಕೋಪದ ಸ್ಥಿತಿಯಲ್ಲಿರುವಾಗ ನೀರು ಕುಡಿಯುವುದು, ನಿಂತಿದ್ದಾಗ ಕುಳಿತುಕೊಳ್ಳುವುದು, ಕುಳಿತಿದ್ದರೆ ಮಲಗುವುದು, ಉದ್ರಿಕ್ತ ಸ್ಥಳದಿಂದ ದೂರ ಸರಿಯುವುದು ಅಥವಾ ಯಾವುದಾದರೂ ಶ್ರಮದ ಕೆಲಸ ಮಾಡುವುದರಿಂದ ಕೋಪ ತಗ್ಗುತ್ತದೆ. ಈ ಉಪಾಯಗಳನ್ನು ಕಲಿಸಬೇಕು. ಅಭ್ಯಾಸ ಮಾಡಿಸಬೇಕು.

ಇವು ಮಕ್ಕಳ ಪ್ರಮುಖ ಸ್ಥಭಾವಗಳಾಗಿವೆ. ಇವಲ್ಲದೆ ಇನ್ನೂ ಕೆಲವು ಪ್ರಮುಖ ಸ್ವಾಭಾವಿಕ ಇಚ್ಛೆ ಮತ್ತು ಮೂಲಭೂತ ಒಲವುಗಳಿವೆ. ಅವು ಶಿಕ್ಷಣ ತರಬೇತಿಯ ದೃಷ್ಟಿಯಲ್ಲಿ ಅಪಾರ ಮಹತ್ವವನ್ನು ಹೊಂದಿವೆ. ಅವು ಮಕ್ಕಳ ಗುಣ, ಸ್ವಭಾವ, ಚಾರಿತ್ರ್ಯ ಮತ್ತು ನಡತೆಯ ಮೇಲೆ ದೂರಗಾಮಿ ಪ್ರಭಾವವನ್ನು ಬೀರುತ್ತವೆ.

Leave a Reply