ಬಸ್ಟರ್ ಕೀಟನ್ ನ ಬಹುತೇಕ ಚಿತ್ರಗಳು ಮೂಕಿ. ಗಟ್ಟಿ ಕಥೆ, ಚುರುಕು ನಟನೆ, ತಾಂತ್ರಿಕತೆಯ ಅಚ್ಚುಕಟ್ಟುತನ, ಮನೋಜ್ಞ ಸಂಗೀತ ಇರಲು ಭಾಷೆಯ ಹಂಗೇಕೆ? ಬಸ್ಟರ್ ಕೀಟನ್ ನ ಸುಪ್ರಸಿದ್ಧ ಚಿತ್ರ ‘ದಿ ಜನರಲ್’. ಇದು ಅಮೆರಿಕ ಅಂತರ್ಯುದ್ಧ ಸಮಯದಲ್ಲಿ ರೈಲು ಚಾಲಕನೊಬ್ಬ ತನ್ನ ಪ್ರೇಯಸಿಗಾಗಿ ಸೈನಿಕನಾಗಲು ಯತ್ನಿಸುವ, ಆಕೆಯನ್ನು ಕಾಪಾಡಿಕೊಳ್ಳಲು ಹೋರಾಡುವ, ತನ್ನವರನ್ನು ಗೆಲ್ಲಿಸುವ ಕಥೆಯ ಹೂರಣ ಹೊಂದಿದೆ. ಇಲ್ಲಿ ನೀಡಿರುವ ವಿಡಿಯೋ ತುಣುಕಿನಲ್ಲಿ ಒಬ್ಬನನ್ನು ಹಿಡಿಯಲು ಇಷ್ಟೊಂದು ಪೊಲೀಸರಿದ್ದರೂ ಹೇಗೆ ತಪ್ಪಿಸಿ ಕೊಲ್ಲುತ್ತಾನೆ ಮತ್ತು ಯಾವುದೇ ಸಂಭಾಷಣೆಗಳಿಲ್ಲದೆ ಹೇಗೆ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತಾನೆ ಎಂಬುದನ್ನು ನೋಡಬಹುದು.

Leave a Reply