ಬೇಕಾಗುವ ಸಾಮಗ್ರಿಗಳು:

ಮೈದಾ- 2 ಕಪ್, ಈಸ್ಟ್- 1 ಸ್ಪೂ., ಸಕ್ಕರೆ- 1/2 ಸ್ಪೂ., ಆಲಿವ್ ಆಯಿಲ್3 ಟೀ.ಸ್ಪೂ., ನೀರು- 1/2 ಕಪ್, ಹಾಲು1/4 ಕಪ್.

ಸ್ಟಫಿಂಗ್‍ಗೆ ಬೇಕಾಗುವ ವಸ್ತುಗಳು: 

ಈರುಳ್ಳಿ- 1, ಕ್ಯಾಪ್ಸಿಕಮ್- 1,ಟೊಮೆಟೊ- 1, ತಾಪ್ರಿಕ ಹುಡಿ- 1/2ಟೀ.ಸ್ಪೂ., ಆಲಿಮ್ ಆಯಿಲ್- 2 ಸ್ಪೂ.,ಗರಮ್ ಮಸಾಲ- 1 ಸ್ಪೂ., ಕರಿಮೆಣಸಿನ ಹುಡಿ- 1/2 ಸ್ಪೂ., ಉಪ್ಪು- ರುಚಿಗೆ, ತಾರ್ಸ್‍ಲೆ ಎಲೆ- ಒಂದು ಹಿಡಿ, ಮಾಂಸದ ಕೀಮ- 1/2 ಕೆ.ಜಿ.

ತಯಾರಿಸುವ ವಿಧಾನ:

ಬಿಸಿ ನೀರು ಮತ್ತು ಹಾಲನ್ನು ಮಿಕ್ಸ್ ಮಾಡಿ ಅದಕ್ಕೆ ಸಕ್ಕರೆ, ಈಸ್ಟ್ ಸೇರಿಸಿ 10 ನಿಮಿಷ ಬಿಡಿ. ಇದಕ್ಕೆ ಉಪ್ಪು, ಮೈದ, ಆಯಿಲ್ ಸೇರಿಸಿ ಚೆನ್ನಾಗಿ ಚಪಾತಿ ಹಿಟ್ಟಿ ನಂತೆ ಕಲಸಿ. ಇದನ್ನು ಒಂದು ಗಂಟೆ ಉಬ್ಬಲು ಇಡಿ. ಒಂದು ಪ್ಯಾನ್‍ನಲ್ಲಿ ಆಲಿವ್ ಆಯಿಲ್ ಬಿಸಿಮಾಡಿ ಅದಕ್ಕೆ ಈರುಳ್ಳಿ, ಕ್ಯಾಪ್ಸಿಕಮ್, ಟೊಮೆಟೊ ಸೇರಿಸಿ ಬಾಡಿಸಿ. ಇದಕ್ಕೆ ಕೀಮ ಸೇರಿಸಿ, ಗರಮ್ ಮಸಾಲೆ ಹುಡಿ, ಕರಿಮೆಣಸಿನ ಹುಡಿ, ಪಾಪ್ರಿಕ, ಉಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ನೀರು ಸೇರಿಸಿ ಬೇಯಿಸಿ. ಪಾಸ್ರ್ಲೆ ಎಲೆ ಹಾಕಿ ಕೆಳಗಿಳಿಸಿ. ತಯಾರಿಸಿಟ್ಟ ಹಿಟ್ಟಿನಿಂದ ಓಮ್ ಶೀಟ್‍ನಲ್ಲಿ ಚಪಾತಿಯಂತೆ ಲಟ್ಟಿಸಿ. ಇದರಲ್ಲಿ ಕೀಮ ಮಸಾಲೆ ಹರಡಿ. ಬದಿಯನ್ನು ಲೋಲ್ ಶೇಪ್‍ನಲ್ಲಿ ಮಡಚಿ. ಮೊಟ್ಟೆಯ ಮಿಶ್ರಣವನ್ನು ಬ್ರಶ್‍ನಲ್ಲಿ ಹರಡಬಹುದು. ಇದನ್ನು ಮೊದಲೇ ಫ್ರೀಹೀಟ್ ಮಾಡಿಟ್ಟ ಓವನ್‍ನಲ್ಲಿ 190 ಡಿಗ್ರಿಯಲ್ಲಿ 14-16 ನಿಮಿಷ ಬೇಕ್ ಮಾಡಿ ತೆಗೆದಿಡಿ.

Leave a Reply