ಬ್ರಿಸ್ಬೇನ್‌ನ ಗಬಾ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ದಿನದಂದು ಭಾರತದ ಬಲಗೈ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಇತಿಹಾಸ ನಿರ್ಮಿಸಿದ್ದಾರೆ. ಈ ಪ್ರವಾಸದ ಕೊನೆಯ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದುಜೆ, ಇನ್ನಿಂಗ್ಸ್‌ನಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಗೆ ಅವರು ಸೇರಿಕೊಂಡರು.
The moment Mohammed Siraj broke through for his first five-wicket haul in Test cricket! @VodafoneAU | #AUSvIND pic.twitter.com/xZgHvrVgZE
— cricket.com.au (@cricketcomau) January 18, 2021
ಸಿರಾಜ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ ಪಡೆದಿದ್ದಾರೆ. 73 ರನ್‌ಗಳಿಗೆ 5 ವಿಕೆಟ್ ಪಡೆದಿದ್ದು ಮಾತ್ರವಲ್ಲ, ಮುಹಮ್ಮದ್ ಸಿರಾಜ್ ತಮ್ಮ ಆಸ್ಟ್ರೇಲಿಯಾ ಪ್ರವಾಸದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರು. ಆಸ್ಟ್ರೇಲಿಯಾದಲ್ಲಿ ಕ್ವಾಂಟೈನ್‌ನಲ್ಲಿದ್ದಾಗ ಅವರ ತಂದೆ ನಿಧನರಾದರು. ತಂದೆಯ ಅಂತಿಮ ಸಂಸ್ಕಾರಕ್ಕೆ ಹಾಜರಾಗಲು ಸಹ ಅವರಿಗೆ ಸಾಧ್ಯವಾಗಲಿಲ್ಲ.
Before the Border-Gavaskar Test series, Siraj lost his father. He then made a promise to himself. Today, he fulfilled it.
Siraj, we are all very proud of you. #TeamIndia #AUSvIND pic.twitter.com/VUMhgJsJO4
— BCCI (@BCCI) January 18, 2021
ತನ್ನ ತಂದೆಯನ್ನು ನೆನಪಿಸಿಕೊಂಡ ಅವರು, ‘ನನ್ನ ಮಗ ದೇಶಕ್ಕಾಗಿ ಆಡಬೇಕೆಂದು ತಂದೆ ಬಯಸಿದ್ದರು. ಇಡೀ ಪ್ರಪಂಚ ನಾನು ಆಡುವುದನ್ನು ನೋಡುತ್ತಿದೆ, ಆದರೆ ಈ ದಿನವನ್ನು ನೋಡಲು ಅವರು ಜೀವಂತವಾಗಿರುತ್ತಿದ್ದರೆ ಎಷ್ಟೊಂದು ಚೆನ್ನಾಗಿತ್ತು. ಅವರ ಪ್ರಾರ್ಥನೆಯ ಫಲವೇ ನಾನು ಐದು ವಿಕೆಟ್ ಪಡೆದಿದ್ದೇನೆ” ಎಂದರು.