ಇಪ್ಪತ್ತು ವರ್ಷಗಳಿಂದ ಜತನದಿಂದ ಕಾಪಾಡಿ ಬೆಳೆಸಿದ ಅನುಪಮಳಿಗೆ ಈಗ ಹಲವು ಸವಾಲುಗಳಿವೆ. ಪತ್ರಿಕೋದ್ಯಮದಲ್ಲಿ ಸ್ಥಿತ್ಯಂತರ ಆಗುತ್ತಿರುವ ಈ ಕಾಲಘಟ್ಟ ದಲ್ಲಿ ನೀವು ಬೆಳೆಸಿದ ಅನುಪಮಳನ್ನು ಇನ್ನೂ ಚೆನ್ನಾಗಿ ಪೋಷಿಸಬೇಕಾದ ಜವಾಬ್ದಾರಿ ಸಹೋದರಿಯರ ದ್ದಾಗಿದೆ. ಪತ್ರಿಕೆಗಳೆಂದರೆ ಸವಾಲುಗಳು ಎಂಬುದು ಎಲ್ಲಾ ಪತ್ರಕರ್ತರಿಗೂ ತಿಳಿದ ವಿಷಯವೇ. ಅನುಪಮ ಆದಷ್ಟು ಬೇಗ ಡಿಜಿಟಲೀಕರಣ ಗೊಂಡು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಆ ರೀತಿಯಲ್ಲಿ ಇದನ್ನು ಉಳಿಸಲು ಸಾಧ್ಯ.” ಎನ್ನುತ್ತಾ ಅನುಪಮ 20 ವರ್ಷ ಪೂರೈಸಿದ ಸಂಭ್ರಮಾಚರಣೆ ಯಲ್ಲಿ ಅನುಪಮ ಬಳಗಕ್ಕೆ ವಿಜಯ ಟೈಮ್ಸ್ ಪ್ರಧಾನ ಸಂಪಾದಕಿ ವಿಜಯಲಕ್ಷ್ಮಿ ಶಿಬರೂರು ಶುಭ ಹಾರೈಸಿದರು.

ಶನಿವಾರ ಡಿಸಂಬರ್ 26, ಅಪರಾಹ್ನ 3 ಗಂಟೆಗೆ ಮಂಗಳೂರಿನ ಶಾಂತಿ ಪ್ರಕಾಶನ ಸಭಾಂಗಣದಲ್ಲಿ ನಡೆದ ಅನುಪಮ ಮಹಿಳಾ ಮಾಸಿಕದ 20ನೆಯ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.

ANUPAMA women's monthly Magazine || page-1

ಪುರುಷ ಪ್ರಧಾನ ಕ್ಷೇತ್ರ ವಾದ ಪತ್ರಿಕಾರಂಗದಲ್ಲಿ ಸ್ತ್ರೀಯರ ಉಪಸ್ಥಿತಿ ಯನ್ನು ಸಹಿಸದ ಹಲವು ಪುರುಷರಿದ್ದರೂ ಬೆನ್ನು ತಟ್ಟಿ ಹುರಿದುಂಬಿಸುವ ಪುರುಷ ಸಮೂಹದಿಂದ ಸ್ತ್ರೀಯು ಮುನ್ನಡೆಯಲು ಖಂಡಿತಾ ಸಾಧ್ಯ.ಸತ್ಯ ಹಾಗೂ ನೇರ ದಾರಿಯಲ್ಲಿ ಹಲವು ತೊಡಕುಗಳಿ ದ್ದರೂ ದಿಟ್ಟವಾಗಿ ಎದುರಿಸಿ ಮುನ್ನುಗ್ಗಿ ದ್ದಲ್ಲಿ ಸಫಲತೆ ಖಂಡಿತ ಸಾಧ್ಯ.ತೊಡಕುಗಳನ್ನು ನಿವಾರಿಸಿ ನಿಖರವಾಗಿ ಮುಂದಡಿ ಇಡಲು ಅನುಪಮಕ್ಕೆ ಕರೆ ನೀಡಿದರು.

ತಮ್ಮ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳು ,ಎದುರಿಸಿದ ರೀತಿಗಳನ್ನು ಸಭಿಕರೊಂದಿಗೆ ಹಂಚಿಕೊಂಡರು.
ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ ದಲ್ಲಿ ಸನ್ಮಾನ ಕಾರ್ಯಕ್ರಮ ವನ್ನೂ ಹಮ್ಮಿಕೊಳ್ಳಲಾಗಿತ್ತು. ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ ಜೂಲಿಯೆಟ್ ಬಿ.ಪಿಂಟೋ, ಆರೋಗ್ಯ ಕ್ಷೇತ್ರದಲ್ಲಿ ಅದರಲ್ಲೂ ಕೊರೋನ ಸಂದರ್ಭದಲ್ಲಿ ಮುಂಚೂಣಿಯಲ್ಲಿದ್ದು ರೋಗಿಗಳ ಸೇವೆಗೈದ ದಾದಿ ಭವ್ಯ,ಹಾಗೂ ಸಮಾಜ ಸೇವೆ ಯಲ್ಲಿ ಸದಾ ಮುಂಚೂಣಿಯಲ್ಲಿರುವ ಮುಮ್ತಾಜ್ ವಾಮಂಜೂರು ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

Women allowing corporate bodies to depict them in poor light: Vaidehi | coastaldigest.com - The Trusted News Portal of India

ಮುಖ್ಯ ಅತಿಥಿಗಳಾಗಿ ಕರಾವಳಿ ವಾಚಕಿ ಲೇಖಕಿಯರ ಸಂಘದ ಕಾರ್ಯದರ್ಶಿ ಸುಖಲಾಕ್ಷಿ ವೈ. ಸುವರ್ಣ ಹಾಗೂ ಮುಸ್ಲಿಮ್ ಮಹಿಳಾ ಸಾಹಿತ್ಯ ಸಂಘದ ಅಧ್ಯಕ್ಷೆ ಸಮೀನಾ ಅಫ್ಶಾನ್ ಅತಿಥಿ ಭಾಷಣ ಮಾಡಿ ಅನುಪಮದ ಏಳಿಗೆಗೆ ಹಾರೈಸಿದರು.
ಅನುಪಮ ದ ಪ್ರಧಾನ ಸಂಪಾದಕಿ ಶಹನಾಜ್ ಎಂ. ಅಧ್ಯಕ್ಷತೆ ವಹಿಸಿದ್ದರು. ಸಬೀಹಾ ಫಾತಿಮಾ ಪ್ರಸ್ತಾವನೆ ಮಾಡಿ ಎಲ್ಲರನ್ನೂ ಸ್ವಾಗತಿಸಿದರು. ಕುಲ್ಸೂಮ್ ಅಬೂಬಕ್ಕರ್ ಸನ್ಮಾನಿತರ ವಿವರ ನೀಡಿದರು. ಸಮೀನಾ ನೂರ್ ಧನ್ಯವಾದ ಅರ್ಪಿಸಿದರು
ಶಹೀದ ಉಮರ್ ಕಾರ್ಯಕ್ರಮ ನಿರೂಪಿಸಿದರು.

Leave a Reply