ನವದೆಹಲಿ: ಇನ್ನುಮುಂದೆ ಎಲ್‌ಪಿಜಿ ಅಡುಗೆ ಅನಿಲದ ದರ ಪ್ರತಿ ವಾರ ಬದಲಾವಣೆ ಹೊಂದಲಿದೆ. ಇದು ಹೊಸ ವರ್ಷದಲ್ಲಿ ಜಾರಿಗೆ ಬರಲಿದೆ. ಈಗ ಪ್ರತಿ ತಿಂಗಳೂ ದರ ಬದಲಾವಣೆ ಆಗುತ್ತಿತ್ತು. ತಿಂಗಳ ಮಧ್ಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬದಲಾವಣೆ ಬಂದಲ್ಲಿ ಆಯಾ ತೈಲ ಕಂಪನಿಗಳು ನಷ್ಟವನ್ನು ಅನುಭವಿಸಬೇಕಿತ್ತು. ಈಗ ಅದೇ ವಾರದಲ್ಲಿ ದರ ಬದಲಾಗಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿದಿನ ಬದಲಾಗುತ್ತದೆ. ಅದೇರೀತಿ ಪ್ರತಿ ವಾರ ಅಡುಗೆ ಅನಿಲದ ದರ ಬದಲಾಗಲಿದೆ. ಇದರಿಂದ ಕಂಪನಿಗಳಿಗೆ ಹೆಚ್ಚು ನಷ್ಟ ಸಂಭವಿಸುವುದಿಲ್ಲ.

ಗ್ರಾಹಕರಿಗೆ ನೀಡುವ ಸಹಾಯಧನ ಕೊನೆಗೊಳ್ಳುವ ಸಂದರ್ಭ ಬರಲಿದೆ. ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಗ್ರಾಹಕರು ಭರಿಸುವ ಹಾಗೆ ಎಲ್‌ಪಿಜಿ ದರ ಜನರೇ ಭರಿಸಬೇಕಾದ ಕಾಲ ಬರಲಿದೆ.

Leave a Reply