1. ಶ್ರೀದೇವಿ 1963 ರಲ್ಲಿ ಅಯ್ಯಪನ್ ಯಾಂಗರ್ ಮತ್ತು ರಾಜೇಶ್ವರಿ ದಂಪತಿಗಳಿಗೆ ಜನಿಸಿದರು. ಶ್ರೀಮಮ್ಮ ಯಾಂಗರ್ ಅಯ್ಯಪನ್ ಎಂದು ಶ್ರೀದೇವಿಗೆ ಹೆಸರಿಸಲಾಯಿತು. ಆಕೆಯ ತಂದೆ ವಕೀಲರಾಗಿದ್ದರು.

2. ನಾಲ್ಕು ವರ್ಷ ಪ್ರಾಯದಲ್ಲೇ ಶ್ರೀದೇವಿ ಮುಖ್ಯವಾಹಿನಿಯ ನಟನಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು. ಭಕ್ತಿ ಚಿತ್ರವಾದ ತುನೈವಾನ್ (1969) ಅವರು ನಟಿಸಿದ ಮೊದಲ ಚಿತ್ರ .

3. ಜೂಲಿ (1975) ಎಂಬ ಚಲನಚಿತ್ರದಲ್ಲಿ ಅವರು ಬಾಲ್ಯ ನಟಿಯಾಗಿ ಮಿಂಚಿದರು. ಸೊಲ್ವಾ ಸವನ್ ಅವರೊಂದಿಗೆ, ಶ್ರೀದೇವಿ 1979 ರಲ್ಲಿ ಬಾಲಿವುಡ್ ಪ್ರವೇಶಿಸಿದರು.

4. ಚಾಲ್ಬಾಜ್ (1989) ನ ಜನಪ್ರಿಯ ಹಾಡು ನಾ ಜಾನೆ ಕಹಾ ಸೇ ಆಯಿ ಹೈ ಚಿತ್ರಕ್ಕಾಗಿ ಚಿತ್ರೀಕರಣಗೊಂಡಾಗ 103 ಡಿಗ್ರಿ ಜ್ವರದಿಂದ ಬಳಲುತ್ತಿದ್ದರು. ಇದು ಅವರ ಬದ್ಧತೆಯನ್ನು ಸೂಚಿಸುತ್ತದೆ.

Image result for sridevi in chaalbaaz

5. ಸದ್ಮಾ (1983), ಚಾಂದನಿ (1989), ಗರಂಜಾ (1991) ಮತ್ತು
ಕ್ಷಣ ಕ್ಷಣಮ್ (1991) ಮುಂತಾದ ಚಿತ್ರಗಳಲ್ಲಿ ಶ್ರೀದೇವಿ ಹಿನ್ನೆಲೆ ಗಾಯಕಿಯಾಗಿ ಹಾಡಿದ್ದಾರೆ.

6. ಸ್ಟೀವನ್ ಸ್ಪೀಲ್‌ಬರ್ಗ್ ರವರ ಖ್ಯಾತ ಸಿನೆಮಾ ಜುರಾಸಿಕ್‌ ಪಾರ್ಕ್ (1993) ನಲ್ಲಿ ಬಿಡುಗಡೆಯಾಗಿತ್ತು. ಶ್ರೀದೇವಿ ಈ ಚಿತ್ರದಲ್ಲಿ ಸಣ್ಣ ಪಾತ್ರವನ್ನು ವಹಿಸಿದ್ದರು. ಮಾತ್ರವಲ್ಲ, ಬಾಲಿವುಡ್ ನಲ್ಲಿ ಬ್ಯುಸಿ ಇದ್ದ ಕಾರಣ ಅವರು ಇತರ ಆಫರ್ ಗಳನ್ನು ತಿರಸ್ಕರಿಸಿದ್ದರು.

7. ಶ್ರೀದೇವಿ ಅವರ ಮಾತೃ ಭಾಷೆ ತಮಿಳು. ಹಾಗಾಗಿ ಅವರು ಬಾಲಿವುಡ್‌ ಪ್ರವೇಶಿಸಿದಾಗ ಅವರಿಗೆ ಹಿಂದಿ ಮಾತನಾಡಲು ಕಷ್ಟವಾಗಿತ್ತು. ಆದ್ದರಿಂದ ನಾಝ್ ಅವರ ಧ್ವನಿಯನ್ನು ಡಬ್ ಮಾಡುತ್ತಿದ್ದರು. ಚಾಂದಿನಿ ಸಿನೆಮಾದಲ್ಲಿ ಅವರು ಸ್ವತಃ ಧ್ವನಿ ನೀಡಿದರು.

8. ಜಯಪ್ರದಾ ಅವರನ್ನು ಶ್ರೀದೇವಿ ಅವರ ಪ್ರಬಲ ಪ್ರತಿಸ್ಪರ್ಧಿ ಎಂದು ಪರಿಗಣಿಸಲಾಗುತ್ತಿತ್ತು.

9.ಹಿಂದಿ ಚಿತ್ರರಂಗದಲ್ಲಿ ಸೊಲ್ವ ಸಾವನ್, ಹಿಮ್ಮತ್ ವಾಲಾ, ಮಾವಾಲಿ, ತೋಹ್ಫ, ಮಾಸ್ಟರ್ಜಿ, ಕರ್ಮ, ಮಿಸ್ಟರ್ ಇಂಡಿಯಾ, ವಕ್ತ್ ಕಿ ಆವಾಜ್, ಚಾಂದನಿ, ಸದ್ಮಾ, ನಗೀನ, ಚಾಲ್ ಬಾಜ್, ಲಮ್ಹೆ, ಖುದಾ ಗವಾಹ್, ಗುಮ್ರಾಹ್, ಲಾಡ್ಲಾ, ಜುದಾಯಿ ಮುಂತಾದ ಪ್ರಸಿದ್ಧ ಚಿತ್ರಗಳಲ್ಲಿ ತಮ್ಮ ಪ್ರತಿಭೆ, ಯಶಸ್ಸುಗಳಿಂದ ರಾರಾಜಿಸಿದ್ದರು.

Image result for sridevi in chandni

10. ಹಿರಿಯ ನಿರ್ಮಾಪಕ ಬೋನಿ ಕಫೂರ್ ಅವರನ್ನು ವರಿಸಿದ ಶ್ರೀದೇವಿ ಅವರು 1997ರ ನಂತರದಲ್ಲಿ ಸುಮಾರು ಹದಿನೈದು ವರ್ಷಗಳ ನಂತರದಲ್ಲಿ 2015 ವರ್ಷದಲ್ಲಿ ‘ಇಂಗ್ಲಿಷ್ ವಿಂಗ್ಲಿಷ್’ ಎಂಬ ಯಶಸ್ವೀ ಚಿತ್ರದಲ್ಲಿ ತಮ್ಮ ಸುಂದರ ಅಭಿನಯದೊಂದಿಗೆ ಮೋಡಿ ಮಾಡಿ ಮತ್ತೊಮ್ಮೆ ತಾನೆಷ್ಟು ಪ್ರತಿಭಾವಂತೆ ಎಂದು ಸಾಬೀತುಪಡಿಸಿದ್ದಾರೆ.

11. ಚಿತ್ರರಂಗದಲ್ಲಿ ಪ್ರಸಿದ್ಧಿಗೆ ದ್ಯೋತಕವಾಗಿರುವ ಹಲವಾರು ರೀತಿಯ ನೂರಾರು ಪ್ರಶಸ್ತಿಗಳನ್ನು ಉತ್ತರ ಮತ್ತು ದಕ್ಷಿಣ ಭಾರತಗಳಲ್ಲಿ ಸ್ವೀಕರಿಸಿರುವ ಶ್ರೀದೇವಿ ಪ್ರಸಕ್ತ ವರ್ಷದಲ್ಲಿ ‘ಪದ್ಮಶ್ರೀ’ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

Leave a Reply