ರೇಪ್ ಅಂದ ತಕ್ಷಣ ನಮಗೆ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತ್ಯಾಚಾರ ಎಂಬ ಭಾವನೆ ಬರುತ್ತದೆ. ಆದರೆ ಹುಡುಗರನ್ನೂ ನಿರ್ದಯವಾಗಿ ಅತ್ಯಾಚಾರ ಮಾಡಲಾಗುತ್ತದೆ.
ಕತುವಾ ಅತ್ಯಾಚಾರ ಪ್ರಕರಣ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು. ಇದೀಗ ಮತ್ತೊಂದು ಭೀಕರ ಘಟನೆ ಬೆಳಕಿಗೆ ಬಂದಿದೆ.

ಗಾಝಿಯಾಬಾದ್ ನಲ್ಲಿ 17 ವರ್ಷದ ವಿದ್ಯಾರ್ಥಿಯನ್ನು ಐವರು ಸೇರೆ ರೇಪ್ ಮಾಡಿದ್ದು, ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತುರುಕಿದ ರಾಕ್ಷಸೀಯ ಪ್ರಕರಣ ವರದಿಯಾಗಿದೆ.
ಹದಿಹರೆಯದ ವಿದ್ಯಾರ್ಥಿ ತನ್ನ ಮೋಟಾರ್ಸೈಕಲನ್ನು ರಿಪೇರಿಗೆ ಇಟ್ಟು ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.

ಐವರು ವಿದ್ಯಾರ್ಥಿಯನ್ನು ಎಳೆದು ಅಂಗಡಿಯೊಳಗೆ ತಂದರು. ಆತ ಪ್ರತಿರೋಧಿಸಿದಾಗ ಆತನ ಗುದನಾಳದಲ್ಲಿ ಒಂದು ಕಬ್ಬಿಣದ ರಾಡ್ ತುರುಕಿ ಮೊಬೈಲ್ ಫೋನ್ನಲ್ಲಿ ಚಿತ್ರೀಕರಿಸಿದರು. ಮಾತ್ರವಲ್ಲ ಆರೋಪಿಗಳು ವಿದ್ಯಾರ್ಥಿಯಿಂದ 1,600 ರೂ ಲೂಟಿ ಮಾಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧೀಕ್ಷಕ ವೈಭವ್ ಕೃಷ್ಣ ಹೇಳಿದ್ದಾರೆ.

ಪೊಲೀಸರು IPC ಮತ್ತು POCSO ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತನ್ನ ಮಗನನ್ನು ದೀರ್ಘಕಾಲದಿಂದ ಕಿರುಕುಳ ಮಾಡುತ್ತಿದ್ದ ಎಂದು ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ. ಅವರು ಹುಡುಗನಲ್ಲಿ ಜಾತಿ ಕಸವನ್ನು ಎಸೆದರು. ಆರೋಪಿಗಳಲ್ಲಿ ಒಬ್ಬ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಮಗ ಎಂದು ಆರೋಪಿಸಿದ್ದಾರೆ.

Leave a Reply