6 ನೇ ವಯಸ್ಸಿನಲ್ಲಿ ಕಾರ್ಗಿಲ್ ಯುದ್ಧದಲ್ಲಿ ತನ್ನ ತಂದೆಯ ನಿಧನದ ಸುದ್ದಿ ಕೇಳಿದ್ದನು ಹಿತೇಶ್. ಆಗ ತಾನು ಕೂಡಾ ತಂದೆಯಂತೆಯೇ ಭಾರತೀಯ ಸೇನೆಯನ್ನು ಸೇರಿ ದೇಶ ರಕ್ಷಣೆ ಮಾಡುತ್ತೇನೆ ಎಂದು ನಿರ್ಧರಿಸಿದನು. ತಂದೆಯನ್ನು ಕಳಕೊಂಡ 6 ವರ್ಷದ ಒಬ್ಬ ಪುಟ್ಟ ಬಾಲಕನಿಂದ ನಾವು ಹಾಗೆ ನಿರೀಕ್ಷಿಸುವುದು ಅಷ್ಟು ಸುಲಭದ ಮಾತಲ್ಲ.

ಆದರೆ ಇದೀಗ 19 ವರ್ಷಗಳ ಬಳಿಕ ಅದೇ ರಿತೇಶ್ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ನೇಮಕಗೊಂಡು ತನ್ನ ಅಚಲ ನಿರ್ಧಾರವನ್ನು ಸಾಬೀತು ಪಡಿಸಿದ್ದಾರೆ.

“19 ವರ್ಷಗಳಿಂದ ನಾನು ಸೈನ್ಯಕ್ಕೆ ಸೇರುವ ಕನಸು ಕಂಡಿದ್ದೇನೆ. ಅದು ನನ್ನ ತಾಯಿಯ ಕನಸೂ ಆಗಿತ್ತು. ಈಗ ನಾನು ನನ್ನ ದೇಶವನ್ನು ಹೆಮ್ಮೆಯಿಂದ, ಪ್ರಾಮಾಣಿಕತೆಯೊಂದಿಗೆ ಸೇವೆ ಮಾಡಲು ಬಯಸುತ್ತೇನೆ” ಎಂದು ರಿತೇಶ್ ಹೇಳಿದ್ದಾರೆ.

ಈ ಹಿಂದೆ ಯುದ್ಧದಲ್ಲಿ ತನ್ನ ಗಂಡನನ್ನು ಕಳೆದುಕೊಂಡ ಹಿತೆಶ್ ರವರ ತಾಯಿ ಕಾಮೆಶ್ ಬಾಲಾ, ತನ್ನ ಮಗ ಗಂಡನ ಹಾಗೆಯೇ ಸೇನಾ ಅಧಿಕಾರಿಯಾಗುತ್ತಿದ್ದಾನೆ ಎನ್ನುವಾಗ ಯಾವುದೇ ರೀತಿಯ ಸಂಕೋಚ ಪಡಲಿಲ್ಲ.

“ಬಚನ್ ಹುತಾತ್ಮರಾದಾಗ ಜೀವನ ಬಹಳ ಕಷ್ಟಕರವಾಗಿತ್ತು. ನನ್ನ ಜೀವನವನ್ನು ನನ್ನ ಇಬ್ಬರು ಮಕ್ಕಳನ್ನು ಬೆಳೆಸಲು ಅರ್ಪಿಸಿಕೊಂಡಿದ್ದೇನೆ. ಇಂದು ಹಿತೇಶ್ ಸೇನೆಗೆ ನೇಮಕಗೊಂಡ ಬಗ್ಗೆ ಹೆಮ್ಮೆಪಡುತ್ತೇನೆ. ಅವನ ಕಿರಿಯ ಸಹೋದರ, ಹೇಮಂತ್ ಸಹ ಸೈನ್ಯಕ್ಕೆ ಸೇರಲು ತಯಾರಾಗುತ್ತಿದ್ದಾನೆ. ನಾನು ಅವರಲ್ಲಿ ಬೇರೇನನ್ನೂ ಬಯಸುವುದಿಲ್ಲ” ಎಂದು ಹಿತೇಶ್ ತಾಯಿ ಕಾಮೆಶ್ ಬಾಲಾ ಅಭಿಪ್ರಾಯ ಪಟ್ಟಿದ್ದಾರೆ.

ರಜಪೂತ್ ರೈಫಲ್ಸ್ ಪಡೆಯ 2ನೇ ಬೆಟಾಲಿಯನ್ ನಲ್ಲಿ ತಂದೆ ಬಚ್ಚನ್ ಸಿಂಗ್ ಲ್ಯಾನ್ಸ್ ನಾಯ್ಕ್ ಆಗಿದ್ದರು. 1999 ಜೂನ್ 12 ರಂದು ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದರು. ಈ ಯುದ್ಧದಲ್ಲಿ ಭಾರತೀಯ ಸೈನ್ಯವು ಟೋಲೋಲಿಂಗ್ ಅನ್ನು ಗೆದ್ದುಕೊಂಡಿತು. ಕಾರ್ಗಿಲ್ ನಲ್ಲಿ ಇದು ಭಾರತದ ಮೊದಲ ಜಯವಾಗಿತ್ತು.

Leave a Reply