ಜಾರ್ಖಂಡ್: ದನಗಳ್ಳತನದ ಸಂಶಯದ ಮೇಲೆ ಜಾರ್ಖಂಡ್ನ ಗೊಡ್ಡಾ ಜಿಲ್ಲೆಯಲ್ಲಿ ಇಬ್ಬರು ಯುವಕರನ್ನು ಗ್ರಾಮಸ್ಥರ ಗುಂಪೊಂದು ಹೊಡೆದು ಕೊಂದ ಘಟನೆಯನ್ನು ದಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಕೊಲೆಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.

ಗ್ರಾಮಸ್ಥರು ಹೇಳುವಂತೆ, ಐದು ಜನರ ಗುಂಪೊಂದು ದಲ್ಲು ಗ್ರಾಮದಿಂದ 12 ಎಮ್ಮೆಗಳನ್ನು ಕದ್ದಿದ್ದರು. ಅವರನ್ನು ಗ್ರಾಮಸ್ಥರನ್ನು ಬೆನ್ನಟ್ಟಿದಾಗ, ಅವರಲ್ಲಿ ಮೂವರು ತಪ್ಪಿಸಿಕೊಂಡರೆ ಮುರ್ತಾಝಾ ಅನ್ಸಾರಿ ಮತ್ತು ಚರ್ಕು ಅನ್ಸಾರಿಯನ್ನು ಗ್ರಾಮಸ್ಥರು ಸೆರೆ ಹಿಡಿದಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಕಾಣೆಯಾದ ಎಮ್ಮೆಗಳನ್ನು ಬಂಕಾಟ್ಟಿ ಗ್ರಾಮದಲ್ಲಿ ಇಬ್ಬರ ಬಳಿ ಪತ್ತೆಹಚ್ಚಲಾಗಿತ್ತು, ನಂತರ ಅವರನ್ನು ಹಿಡಿದು ಗ್ರಾಮಸ್ಥರು ಥಳಿಸಿ ಕೊಂದರು ಎಂದು ಗ್ರಾಮಸ್ಥರು ತಿಳಿಸಿದ್ದಾಗಿ ಪೊಲೀಸ್ ಅಧೀಕ್ಷಕ ರಾಜೀವ್ ಕುಮಾರ್ ಸಿಂಗ್ ಹೇಳಿದ್ದಾರೆ

ಜಾರ್ಖಂಡ್ ನಲ್ಲಿ ಇಂತಹ ಘಟನೆ ಹಲವು ಬಾರಿ ನಡೆದಿದೆ. ಮಾರ್ಚ್ ತಿಂಗಳಲ್ಲಿ ಜಾರ್ಖಂಡ್ ನ್ಯಾಯಾಲಯವು 10 ಮಂದಿಯ ಮೇಲೆ ಇಂತಹ ಅಪರಾಧಕ್ಕಾಗಿ ದೋಷಾರೋಪಣೆ ಮಾಡಿದೆ. ರಾಮ್ ಗಢ ಜಿಲ್ಲೆಯಲ್ಲಿ ತನ್ನ ವ್ಯಾನ್ನಲ್ಲಿ ಗೋಮಾಂಸವನ್ನು ಸಾಗಿಸುವ ಅನುಮಾನದ ಮೇಲೆ 55 ವರ್ಷದ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು.

ಈ ಘಟನೆಯ ಬಳಿಕ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಚಾರ್ಕು ಅನ್ಸಾರಿ ಒಮ್ಮೆ ಜೈಲಿನಲ್ಲಿದ್ದರು ಮತ್ತು ಮುರ್ತಾಝಾ ಅನ್ಸಾರಿಯವರ ಸಹೋದರರು ಕೂಡ ದರೋಡೆ ಪ್ರಕರಣದಲ್ಲಿ ಜೈಲಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಕೃಪೆ : ಟೈಮ್ಸ್ ನೌ

Leave a Reply