ಕಾಲ ಬದಲಾದಂತೆ ಮನುಷ್ಯರ ಆದ್ಯತೆಗಳು, ಜೀವನ ಶೈಲಿಯೂ ಬದಲಾವಣೆಗೊಳಪಡುತ್ತಿವೆ. ತಂತ್ರಜ್ಞಾನ ಮನೆ ಒಳಗೆ ಬಂದ ಮೇಲೆ ಮನುಷ್ಯನಿಗೆ ಅದರ ಮೇಲಿನ ಅವಲಂಬನೆ ಕೂಡ ಈಚೆಗೆ ಹೆಚ್ಚಾಗುತ್ತಿದೆ. ಸ್ಮಾರ್ಟ್ ಫೋನ್ ಬಂದ ಮೇಲಂತೂ ಮನುಷ್ಯ ಬಲೆಯಲ್ಲಿ ಸಿಕ್ಕು ನರಳುತ್ತಿರುವ ಜೇಡದಂತಾಗುತ್ತಿದ್ದಾನೆ. ಅದರಲ್ಲೂ ಯುವಜನರು ಒಂದು ಹೆಜ್ಜೆ ಮುಂದೆ ಹೋಗಿ ‘ಸ್ಮಾರ್ಟ್​ಫೋನ್ ಇಲ್ಲದೆ ನಾವಿಲ್ಲ’ ಎನ್ನುವಷ್ಟರ ಮಟ್ಟಿಗೆ ಮೊಬೈಲ್ ಗೀಳಿಗೆ ಬಿದ್ದಿದ್ದಾರೆ.

ಅಷ್ಟು ಮಾತ್ರವಲ್ಲ ತಂದೆ ತಾಯಿಯರೂ ಸ್ಮಾರ್ಟ್ ಫೋನ್ ಹೆಚ್ಚಾಗಿ ಬಳಸುವುದರಿಂದ ಮಕ್ಕಳಿಗೆ ಸಮಯ ಕೊಡುವುದರಲ್ಲೂ ಅವರು ಹಿಂದೆ ಬಿದ್ದಿದ್ದಾರೆ. ಇಲ್ಲೊಬ್ಬಳು ಪುಟ್ಟ ಮಗಳು ತಂದೆಯ ಸ್ಮಾರ್ಟ್ ಫೋನ್ ಅನ್ನು ನೀರಿಗೆ ಬಿಸಾಡುವ ವಿಡಿಯೋ ವೈರಲ್ ಆಗಿದ್ದು ರಷ್ಯಾದ ರಾಪರ್ ಟಿಮಾಟಿಯ ಇತ್ತೀಚೆಗೆ ಕುಟುಂಬದೊಂದಿಗೆ ವಿಹಾರಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದ್ದು, ನಾಲ್ಕು ವಯಸ್ಸಿನ ಹುಡುಗಿ ತನ್ನ ತಂದೆ ನಿರಂತರವಾಗಿ ಫೋನಿನಲ್ಲಿದ್ದ ಕಾರಣ ತುಂಬಾ ಅಸಮಾಧಾನಗೊಂಡಿದ್ದರಿಂದ ಈ ಅದನ್ನು ಸಮುದ್ರಕ್ಕೆ ಎಸೆದಿದ್ದಾಳೆ,

https://www.instagram.com/p/BmQX6fIjZaa/?taken-by=timatiofficial

Leave a Reply