ಹರಿಯಾಣದ ಮೇವತ್​ ಎಂಬಲ್ಲಿ 8 ಮಂದಿಯ ಗುಂಪು ಗರ್ಭಿಣಿ ಮೇಕೆಯೊಂದನ್ನು ತಮ್ಮ ಲೈಂಗಿಕ ತೃಷೆಗಾಗಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಮೇಕೆಯ ಮಾಲೀಕ ಅಸ್ಲು ಈ ಬಗ್ಗೆ ಮೇವತ್​ನ ನಾಗಿನ ಪೊಲೀಸ್​ ಠಾಣೆಯಲ್ಲಿ ಜುಲೈ 26ರಂದು ದೂರು ದಾಖಲಿಸಿದ್ದು, ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಕೆಯು ಮರಣಕ್ಕೀಡಾಗಿದೆ ಎಂದು ತಿಳಿದು ಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿಯ ಮೇಲೆ ಕೇಸು ದಾಖಲಿಸಲಾಗಿದ್ದು, ಈ ಪೈಕಿ ಮೂವರ ಗುರುತು ಪತ್ತೆ ಹಚ್ಚಲಾಗಿದ್ದು ಎಲ್ಲರೂ ತಲೆಮರೆಸಿಕೊಂಡಿದ್ದಾರೆ. ಮೇಕೆಯ ಮೇಲೆ ಅತ್ಯಾಚಾರವೆಸಗಿದವರು ಮಾದಕ ವ್ಯಸನಿಗಳಾಗಿದ್ದು, ಘಟನೆ ನಡೆಯುವಾಗ ಮದ್ಯ ಸೇವಿಸಿದ್ದರು ಎನ್ನಲಾಗಿದೆ.

“ಗುರುತು ಪತ್ತೆಹಚ್ಚಲಾದ ಮೂವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ನಾವು ಅವರಿಗಾಗಿ ಶೋಧ ನಡೆಸುತ್ತಿದ್ದೇವೆ. ಮೇಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ಹೇಳಿದ್ದಾರೆ.

“ಇಂತಹ ಹಿಂಸಾತ್ಮಕ ಮನಸ್ಥಿತಿಯ ಸಾಮಾನ್ಯವಾಗಿ ಮೊದಲು ಪ್ರಾಣಿಗಳೊಂದಿಗೆ ತಮ್ಮ ಕಾಮ ತೃಷೆ ತೀರಿಸಿ ಬಳಿಕ ಮನುಷ್ಯರತ್ತ ತಿರುಗುತ್ತಾರೆ. ಈ ಪ್ರಕರಣವು ಪ್ರತಿಯೊಬ್ಬರಿಗೂ ಎಚ್ಚರಿಕೆಯ ಸಂದೇಶ “ಎಂದು ಪ್ರಾಣಿ ಹಕ್ಕುಗಳ ಸಂಘ ಪಿಇಟಿಎ ಸದಸ್ಯ ಅಶರ್ ಹೇಳಿದ್ದಾರೆ.

Leave a Reply