ಸಂದರ್ಭೋಚಿತ ಚಿತ್ರ

ಅಪ್ಪ ದಿನಾ ಕುಡಿದು ಬಂದು ತಾಯಿಗೆ ಕೀಟಲೆ ಕೊಡುತ್ತಿದ್ದದ್ದನ್ನು ಆರು ವರ್ಷದ ಮಗಳು ಧರಣಿ ನೋಡುತ್ತಲೇ ಇದ್ದಳು.

ದಿನಾ ತಾಯಿಗೆ ನೀಡುವ ಚಿತ್ರಹಿಂಸೆ ನೋವು ಮಾತ್ರವಲ್ಲ, ಮನೆಯಲ್ಲಿ ಶೌಚಾಲಯ ಇಲ್ಲದೆ ತಾಯಿ ಕಷ್ಟ ಪಡುವುದನ್ನು ಅವಳು ನೋಡಿ ದುಖಿಸುತ್ತಿದ್ದಳು.

ಆ ಪುಟ್ಟ ಮಗು ಒಂದಿನ ಧೈರ್ಯ ಮಾಡಿ, ಅಪ್ಪಾ ನೀನು ಕುಡಿತ ನಿಲ್ಲಿಸದಿದ್ದರೆ ನಿನ್ನನ್ನು ಬಿಟ್ಟು ನಾನು ಅಮ್ಮ ಅಜ್ಜಿ ಮನೆಗೆ ಹೋಗುತ್ತೇವೆ. ಮಾತ್ರವಲ್ಲ, ನಾವಿರಬೇಕಾದರೆ ಶೌಚಾಲಯ ಕಟ್ಟಿ ಕೊಡು ಎಂದು ಧರಣಿ ದೈರ್ಯ ಮಾಡಿ ಹೇಳುತ್ತಾಳೆ.

ಮಗಳ ಒತ್ತಾಯಕ್ಕೆ ಅಪ್ಪನಿಗೆ ಮಣಿಯಲೇ ಬೇಕಾಯಿತು.

ನನ್ನ ಗಂಡನಿಗೆ ಬೇರೆ ಆಯ್ಕೆ ಇರಲಿಲ್ಲ. ಈಗ ನಮಗೆ ಶೌಚಾಲಯವಿದೆ “ಎಂದು ಕಾರ್ತಿಕಾ ದಿ ಹಿಂದೂ ಪತ್ರಿಕೆಗೆ ತಿಳಿಸಿದರು.

ಅವರ ತಂದೆ ರಜಪಾಂಡಿ ಕುಡಿತವನ್ನು ಬಿಟ್ಟು ದುಡಿಯಲು ತೊಡಗಿದರು.

“ಇದಕ್ಕೆಲ್ಲಾ ಪ್ರೇರಣೆ ನಮ್ಮ ಟೀಚರ್, ಅವರು ನಮಗೆ ಶುಚಿತ್ವದ ಮಹತ್ವ ಹೇಳಿ ಕೊಡುತ್ತಿದ್ದರು” ಎಂದು ಧರಣಿ ಹೇಳುತ್ತಾರೆ.

ಆತೂರು ಬ್ಲಾಕ್‌, ಅಂಬತುರೈನಲ್ಲಿರುವ ಕುರುಂಬಪಟ್ಟಿ ಎಂಬ ಗ್ರಾಮದಲ್ಲಿ ಇದು ನಡೆದಿದೆ.

Leave a Reply