ಕಾಪು ಮೂಲದ ಅಜೀತ್ ಎನ್ನುವ ವ್ಯಕ್ತಿ ಮೂರು ದಿನದಿಂದ ಮನೆಗೆ ಹೋಗದೆ ಊರು ಊರು ಅಲೆದಾಡುತಿದ್ದ.  ಅಜೀತ್ ಇವತ್ತು ಕುಂದಾಪುರದ ಎಮ್ ಕೋಡಿಯಲ್ಲಿ ಸಿಕ್ಕಿದ್ದು ಕಾಲಿಗೆ ಬಟ್ಟೆ ಕಟ್ಟಿ ಕುಳಿತಿರುವುದನ್ನು ಗಮನಿಸಿದ ಎಮ್ ಕೋಡಿಯ ಸಾಮಾಜಿಕ ಕಾರ್ಯಕರ್ತ ಅಬ್ಬಾಸ್ ಕೋಡಿ ಹತ್ತಿರ ಹೋಗಿ ವಿಚಾರಿಸಿದಾಗ ನಾನು ಕಾಪುವಿನವನು. ನಾನು ಮನೆ ಬಿಟ್ಟು ಮೂರು ದಿನವಾಯಿತು. ನಾನು ಹೊಟ್ಟೆಗೆ ಏನು ತಿಂದಿಲ್ಲ ಸ್ವಲ್ಪ ವೈಯಕ್ತಿಕ ತೊ೦ದರೆಯಿಂದ ಮನೆ ಬಿಟ್ಟಿದ್ದೇನೆ ಎಂದು ತಿಳಿಸಿರುತ್ತಾರೆ.

ಅವರಿಗೆ ಹೊಟ್ಟೆಗೆ ತಿನ್ನಲು ಕೊಟ್ಟು ಅಬ್ಬಾಸ್ ರವರು ತಕ್ಷಣ ಕುಂದಾಪುರದ ಪೋಲಿಸರಿಗೆ ವಿಷಯವನ್ನು ತಿಳಿಸಿ ಅಜೀತ್ ರವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವರ ಕಾಲಿಗೆ ಚಿಕಿತ್ಸೆಯನ್ನು ನೀಡಿದ್ದಾರೆ. ಜಾತಿ, ಧರ್ಮ ನೋಡದೆ ಸಹಾಯ ಮಾನವೀಯತೆ ಮೆರೆಯುವುದು ನಮ್ಮ ಧರ್ಮ ಎಂದು ತಿಳಿದು ಕೊಂಡವರು ಅಬ್ಬಾಸ್ ಕೋಡಿ ಎಂದು ಹೇಳುತ್ತಾರೆ ಅಲ್ಲಿನ ಯುವಕರು.

ಜಾತಿ ಮತ ಧರ್ಮಗಳನ್ನು ನೋಡದೆ ಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ಸಹಾಯ ಸಹಕಾರ ಮಾಡುವುದು ನಮಗೆ ಧರ್ಮ ಕಲಿಸಿ ಕೊಡುತ್ತದೆ. ಜಾತಿ ಮತ ಧರ್ಮ ನೋಡದೆ ಜನರಿಗೆ ರಕ್ತದಾನ ಮಾಡಬೇಕೆಂದು ಧರ್ಮ ನಮಗೆ ಕಲಿಸಿ ಕೊಡುತ್ತದೆಯೇ ಹೊರತು ರಕ್ತ ಹರಿಸಲು ಯಾವ ಧರ್ಮವೇ ಕಲಿಸಿ ಕೊಡುವುದಿಲ್ಲ.

Leave a Reply