ಸಾಂದರ್ಭಿಕ ಚಿತ್ರ

ತಾಯಿಯ ಪ್ರೀತಿ ಅದು ಸತ್ಯವಾಗಿದೆ. ಸಹನೆಯಾಗಿದೆ.. ಅದರಲ್ಲಿ ಯಾವುದೇ ಕಲಂಕವು ಇಲ್ಲ.. ಆದರೆ ತಂದೆಯವರ ರೋಲ್ ಇದೆಯಲ್ಲ ಅದೇನಾಗಿದೆ.?

  • ಪ್ರೀತಿಯನ್ನು ತೋರ್ಪಡಿಸದೆ ದುಡಿದು ದುಡ್ಡು ಗುಡ್ಡೆ ಹಾಕುವ ಯಂತ್ರವಾಗಿದ್ದಾರ.?
  • ಒಮ್ಮೆಯು ನಗು ಬೀರದ ತಂದೆ… ತಮಾಷೆ ಮಾತನಾಡದ ತಂದೆ ಸಣ್ಣಪುಟ್ಟ ವಿಷಯಗಳಿಗೆಲ್ಲಾ ದಂಡಿಸಲು ತಯಾರಾಗುವವರು ಮಾತ್ರವಾಗಿದ್ದಾರ?.. ಅಲ್ಲ ಒಮ್ಮೆಯು ಅಲ್ಲ…
  • ತಂದೆಯವರು ನೆನೆದ ಮಳೆಯಾಗಿದೆ ಇವತ್ತು ನಾವು ಅನುಭವಿಸುತ್ತಿರುವ ತಂಪು.
  • ತಂದೆಯವರು ಕಂಡ ಆ ಬಿಸಿಲಾಗಿದೆ ಇವತ್ತಿನ ನಮ್ಮ ನೆರಳು..
  • ತಂದೆಯವರು ಸುರಿಸಿದ ಬೆವರಾಗಿದೆ ಇವತ್ತಿನ ನಮ್ಮ ಶರೀರದ ಆರೋಗ್ಯ..
  • ತಂದೆಯವರ ಪ್ರೀತಿಯಾಗಿದೆ ಇವತ್ತಿನ ನಮ್ಮ ಈ ಉತ್ತಮವಾದ ಜೀವನ..
  • ತಂದೆಯವರ ಆ ಕಠೋರ ಸ್ವಭಾವವಾಗಿದೆ ಇವತ್ತು ನಮ್ಮನ್ನು ಕೆಟ್ಟ ಮಾರ್ಗಗಳಿಂದ ದೂರ ಸರಿಸಿದ್ದು.
  • ಧರ್ಮದ ಕುರಿತು ಕಲಿಯಲೂ, ಅದನ್ನು ಬಾಳಲ್ಲಿ ಅಳವಡಿಸಿಕೊಳ್ಳಲೂ ಪ್ರಚೋದನೆ ನೀಡಿದ್ದು ನನ್ನ ತಂದೆ..
  • ತಂದೆಯವರು ನಿದ್ರೆಯನ್ನು ಮರೆತಿರುವುದರಿಂದಾಗಿದೆ ಇವತ್ತು ನಾನು ತಿಂಗಳು ತಿಂಗಳು ಸಂಬಳವನ್ನು ಲೆಕ್ಕೆ ಹಾಕಿ ಪಡೆಯುತ್ತಿರುವುದು. ಪ್ರೀತಿಯನ್ನು ಕೆಲವೊಮ್ಮೆ ಮನಸ್ಸಿನಲ್ಲಿ ಅದುಮಿ ಹಿಡಿದುಕೊಂಡು ನಿಶ್ಯಬ್ದರಾಗಿ ನನ್ನನ್ನು ಬಿಟ್ಟ ಕಣ್ಣಿನಿಂದ ನೋಡುತ್ತಿರುವುತ್ತಾರೆ ನನ್ನ ತಂದೆ..
  • ನಾನು ರೋಗಿಯಾದರೆ ಆಸ್ಪತ್ರೆಯತ್ತ ಕರೆದುಕೊಂಡು ಹೊಗಲು ತಂದೆ.. ಕೈ ಮುರಿದರೆ ಅದಕ್ಕೆ ಬ್ಯಾಂಡೇಜ್ ಕಟ್ಟಲು ತಂದೆ.. ಮನೆಗೆ ಕಟ್ಟಿಗೆ ತರಲು ತಂದೆ.. ಶಾಲೆಗೆ ಸೇರಿಸಲೂ ಕರೆದುಕೊಂಡು ಹೋಗಲು ತಂದೆ..ನನ್ನ ಬೆಳವಣಿಗೆಯ ಇಂಚು ಇಂಚಿನಲ್ಲಿ ನಿನ್ನೆಯ ಸರಿಯಾಗಿದ್ದಾರೆ ನನ್ನ ತಂದೆ… ಅಲ್ಲವೇ?.
  • ಸ್ವಂತವಾಗಿ ಏನೂ ಸಾಧಿಸದೆ ತನ್ನ ಆಯಸ್ಸಿನ ಸರ್ವ ಕಾಲಘಟ್ಟವನ್ನು ಸ್ವಂತ ಕುಟುಂಬಕ್ಕಾಗಿ ಸಮರ್ಪಿಸುವ ಬೇರೆ ಯಾರಿದ್ದಾರೆ ಈ ಲೋಕದಲ್ಲಿ?

ತಂದೆಯವರ ಪ್ರೀತಿಗೆ ಸಮಾನವಾಗಿ ಬೇರೇನಿದೆ?

ತಿಳಿದೋ ತಿಳಿಯದೆಯೋ ತಂದೆಯವರು ಕೆಲವು ಮನೆಗಳಲ್ಲಿ ನಿಶ್ಯಬ್ದದ ನಿಟ್ಟುಸಿರಾಗುತ್ತಾರೆ.. ಆರೋಗ್ಯವಿರುವ ಕಾಲದಲ್ಲಿ ಕಷ್ಟಪಟ್ಟು ಮಕ್ಕಳನ್ನು ಸಾಕಿ ಸಲಹಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳನ್ನಾಗಿ ಮಾಡಿ ವೃದ್ದನಾಗಿ ವಿಶ್ರಮಿಸಲು ಬಯಸುವ ಒಬ್ಬ ತಂದೆಯ ಮುಂದೆ ಮಗನು ಉಚ್ಚಸ್ವರದಲ್ಲಿ ಮಾತನಾಡಕೂಡದು..

ಆ ಹೃದಯವನ್ನು ಬಲು ಸೂಕ್ಷ್ಮತೆಯಿಂದ ನೋಡಿಕೊಳ್ಳಬೇಕು.. ನೆನೆಯ ಕೂಡದು ಆ ಕಣ್ಣುಗಳಲ್ಲಿನ ಬೆಳಕು.. ಮರೆಯಾಗಕೂಡದು ಆ ಮುಗುಳುನಗು.. ಉಳಿದೆಲ್ಲವುಕ್ಕಿಂತಲೂ ನನಗೆ ಸಂರಕ್ಷಣೆಯನ್ನು ನೀಡುವರು ಎಂದಿರುವ ಒಬ್ಬ ತಂದೆಯ ಮನಸ್ಸಿನ ದೃಡತೆಯನ್ನು ಒಬ್ಬ ಮಗನೂ ಊದಿ ನಂದಿಸಕೂಡದು…

ಬಾಲ್ಯದಲ್ಲಿ ತಂದೆಯವರನ್ನು ಅನುಸರಿಸುವ ವಿಷಯದಲ್ಲಿ ನಾನು ತೋರಿಸಿದ ಅಸಡ್ಡೆಯನ್ನು ನೆನಸಿ ಇವತ್ತು ಮನಸ್ಸು ಅಳುತ್ತಿದೆ…

ಕಣ್ಣು ನಷ್ಟಗೊಂಡ ನಂತರವೇ ಕಣ್ಣಿನ ಬೆಲೆಯು ತಿಳಿಯುವುದು…

ಅದು ನಷ್ಟಗೊಳ್ಳದಂತೆ ಎಚ್ಚೆತ್ತು ಪ್ರೀತಿಸು..

Leave a Reply