ಸೋಶಿಯಲ್ ಮೀಡಿಯಾಗಳಲ್ಲಿ ನಾವು ಇತ್ತೀಚೆಗೆ ಹಲವು ರೀತಿಯ ಅನಗತ್ಯ ಚಾಲೆಂಜ್ ಗಳನ್ನು ಕೇಳಿದ್ದೇವೆ. ಇದೀಗ ದಕ್ಷಿಣ ಭಾರತದ ಹೆಸರಾಂತ ನಟ ಸಿದ್ಧಾರ್ಥ್ ರವರ ಕೇರಳ ಪರಿಹಾರ ನಿಧಿಗೆ ತಮ್ಮಿಂದ ಆಗುವಷ್ಟು ಸಹಾಯ ಮಾಡಬೇಕಾಗಿ ಟ್ವಿಟರ್ ಮೂಲಕ ಕರೆ ಕೊಟ್ಟಿದ್ದಾರೆ.

“Kerala Donation Challenge” ಎಂದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು, ತಾನು ನೀಡಿದ ಮೊತ್ತದ ಪುರಾವೆಯನ್ನು ನೀಡಿ ಈ ರೀತಿ ಪೋಸ್ಟ್ ಮಾಡಿ ಮನವಿ ಮಾಡಿದ್ದಾರೆ.

ನಾನು ಕೇರಳ ಡೊನೇಶನ್ ಚಾಲೆಂಜನ್ನು ಸ್ವೀಕರಿಸಿದ್ದೇನೆ..ನೀವೂ ದಯವಿಟ್ಟು ಈ ಸವಾಲನ್ನು ಸ್ವೀಕರಿಸಿ ಎಂದು ಕೇಳಿಕೊಂಡಿದ್ದಾರೆ.
(I dare you. I beg of you! What do I have to do to make you read and share this? I did the #KeralaDonationChallenge It was awesome! Will you? Please? #KeralaFloods #SaveKerala @CMOKerala,”)

ಈ ಪರಿಸ್ಥಿತಿಯ ಬಗ್ಗೆ ಸಾಕಷ್ಟು ಗಮನ ಕೊಡುವುದರ ಕೊರತೆಯಿಂದಾಗಿ ನನಗೆ ನೋವುಂಟಾಗಿದೆ. ಇದು 2015 ರಲ್ಲಿ ತಮಿಳುನಾಡಿನ ಪ್ರವಾಹದ ಸಮಯದಲ್ಲಿ ರಾಷ್ಟ್ರೀಯ ಮಾಧ್ಯಮದಿಂದ ಪ್ರದರ್ಶಿಸಲ್ಪಟ್ಟ ನಿರ್ಲಕ್ಷ್ಯವನ್ನು ನೆನಪಿಸುತ್ತದೆ ಎಂದು ಸಿದ್ಧಾರ್ಥ್ ಖೇದ ವ್ಯಕ್ತಪಡಿಸಿದರು.

ಕೇರಳದಲ್ಲಿ ಪ್ರವಾಹ ಪರಿಹಾರಕ್ಕೆ ಪ್ರತಿ ರೂಪಾಯಿಯು ಬಹಳ ಪರಿಣಾಮಕಾರಿ. ರಾತ್ರೋರಾತ್ರಿ ಮಾಂತ್ರಿಕ ಚಲನೆಯನ್ನು ಸೃಷ್ಟಿಸುವ ಸಾಮರ್ಥ್ಯ ಸಾಮಾಜಿಕ ಮಾಧ್ಯಮಕ್ಕಿದೆ.

“ಈ ತುರ್ತು ಪರಿಹಾರ ಕಾರ್ಯಕ್ಕೆ ನಿಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಬೇಕು ಮತ್ತು ಅದರ ಪುರಾವೆಯನ್ನು ಆನ್ಲೈನ್ ನಲ್ಲಿ ಪೋಸ್ಟ್ ಮಾಡಿ ಈ ಚಾಲೆಂಜ್ ಇತರರಿಗೂ ನೀಡಬೇಕೆಂದು ಕೋರಿದ್ದಾರೆ.

ನಟ ಸಿದ್ದಾರ್ಥ್ ಮಾತ್ರವಲ್ಲ, ಸೂರ್ಯ, ಕಾರ್ತಿ, ಕಮಲ್ ಹಾಸನ್, ಮೋಹನ್ ಲಾಲ್, ಮಮ್ಮುಟ್ಟಿ, ಅಲ್ಲು ಅರ್ಜುನ್, ವಿಜಯ್ ದೆವರ್ಕೊಂಡ, ದುಲ್ಕರ್ ಸಲ್ಮಾನ್ ಮತ್ತು ಅಸೋಸಿಯೇಷನ್ ​​ಆಫ್ ಮಲಯಾಳಂ ಮೂವೀ ಆರ್ಟಿಸ್ಟ್ಸ್ (ಅಮ್ಮ) ಮುಂತಾದವರೆಲ್ಲರೂ ಕೇರಳ ಪರಿಹಾರ ನಿಧಿಗೆ ಕೊಡುಗೆಯನ್ನು ನೀಡಿದ್ದಾರೆ.

ಕೇರಳದಲ್ಲಿ ಕಳೆದ ಕೆಲವು ವಾರಗಳಲ್ಲಿ ನಿರಂತರ ಮಳೆ ಪ್ರವಾಹದಿಂದಾಗಿ ಕನಿಷ್ಠ 75 ಜನರು ಬಲಿಯಾಗಿದ್ದು, ಕೋಟಿಗಟ್ಟಲೆ ನಾಶ ನಷ್ಟ ಸಂಭವಿಸಿದೆ.

Leave a Reply