ಹೌದು ನಂಬಲೇಬೇಕು. ಇದು ಯಾವುದೇ ಸಿನಿಮಾ, ನಾಟಕ ಅಥವಾ ಇನ್ನೊಂದು ಅಲ್ಲ. ಯುಎಯಿಯ ಶಾರ್ಜದಲ್ಲಿ ನಡೆದ ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ ತಂಡದ ನಡುವಣ ನಡೆದ ಎರಡು ಪ್ರತ್ಯೇಕ ಪರಮ ಆಶ್ಚರ್ಯವನ್ನು ಉಂಟುಮಾಡುವ ಕ್ರಿಕೆಟ್ ಆಟ.

Image result for afghan vs zimbabwe 2018

ಜಿಂಬಾಬ್ವೆ ಹಾಗೂ ಅಫ್ಘಾನಿಸ್ತಾನ ನಡುವಣ ನಡೆದ ಮೊದಲ ಪಂದ್ಯಾಟದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ಬೃಹತ್ 333/5 ರನ್ ದಾಖಲಿಸಿ ಜಿಂಬಾಬ್ವೆ ತಂಡಕ್ಕೆ 334 ರನ್‌ಗಳ ಸವಾಲನ್ನು ನೀಡಿತ್ತು. ಇದನ್ನು ಬೆನ್ನಟ್ಟಿ ಹೋದ ಜಿಂಬಾಬ್ವೆ ಕೇವಲ 179 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡ ಕೊಂಡು 154ರನ್‌ಗಳಿಂದ ಸೊಲನ್ನೊಪ್ಪಿಕೊಂಡಿತು.

Image result for afghan vs zimbabwe 2018

 

ಎರಡನೇ ಪಂದ್ಯಾಟ ನಿನ್ನೆ ಅದೇ ಅಂಕಣದಲ್ಲಿ ನಡೆಯಿತು. ಮೊದಲು ಬ್ಯಾಟಿಂಗ್ ಆಯ್ದುಕೊಂಡ ಜಿಂಬಾಬ್ವೆ ಕಳೆದ ಪಂದ್ಯದಲ್ಲಿ ಅಫ್ಘಾನಿಸ್ತಾನ ಕಲೆ ಹಾಕಿದಷ್ಟೆ 333/5 ರನ್‌ಗಳನ್ನು ಮಾಡಿ 334 ರನ್‌ಗಳ ಸವಾಲು ಅಫ್ಘಾನಿಸ್ತಾನಕ್ಕೆ ನೀಡಿತ್ತು. ಇದನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ ಕಳೆದ ಪಂದ್ಯಾಟದಲ್ಲಿ ಜಿಂಬಾಬ್ವೆ ಮಾಡಿದಷ್ಟೆ ಅಂದರೆ 179 ರನ್ನಿಗೆ ಆಲ್ ಔಟ್ ಆಗಿದೆ. ಇದರೊಂದಿಗೆ ಜಿಂಬಾಬ್ವೆ ಅದೇ ಮಾದರಿಯ ಆಟದ ಮೂಲಕ 154ರನ್‌ಗಳಿಂದ ಅಫ್ಘಾನಿಸ್ತಾನದ ಮೇಲೆ ಸೇಡು ತೀರಿಸಿಕೊಂಡಿದೆ.

Related image

ಮೊದಲ ಪಂದ್ಯ ಅಫ್ಘಾನಿಸ್ತಾನ ‌333/5
ಜಿಂಬಾಬ್ವೆ 179/10 154ರನ್‌ಗಳ ಸೋಲು

ಎರಡೇ ಪಂದ್ಯ ಜಿಂಬಾಬ್ವೆ ‌333/5
ಅಫ್ಘಾನ್ 179/10 154ರನ್‌ಗಳ ಸೋಲು

ಇಂಥದೊಂದು ಆಶ್ಚರ್ಯಕರ ಬೆಳವಣಿಗೆ ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ನಡೆದಿದೆ ಎನ್ನಲಾಗಿದೆ. ಸದ್ಯಕ್ಕೆ ಈ ಸುದ್ದಿ ಇದೀಗ ವೈರಲ್ ಆಗಿದೆ.

Leave a Reply