ನಟ ಕಮಲ್ ಹಾಸನ್ ಧರ್ಮಗಳ ಕುರಿತು ತನ್ನ ನಿಲುವನ್ನು ವ್ಯಕ್ತಪಡಿಸಿದ್ದು, ತಾನು ಹಿಂದೂ ವಿರೋಧಿಯಲ್ಲ. ಆದರೆ ಕ್ರೈಸ್ತ ಮತ್ತು ಇಸ್ಲಾಮ್ ಧರ್ಮವನ್ನು ಸಮಾನ ದೃಷ್ಟಿಯಲ್ಲಿ ನೋಡುತ್ತೇನೆ ಎಂದಿದ್ದಾರೆ. ತಮಿಳ್ನಾಡಿನ ವಾರ ಪತ್ರಿಕೆಯೊಂದರಲ್ಲಿ ತನ್ನ ಸಹೋದರ ಚಂದ್ರಹಾಸ್ ಮತ್ತು ಪುತ್ರಿ ಶೃತಿ ಹಾಸನ್ ಧಾರ್ಮಿಕ ಆಚರಣೆ ಇಷ್ಟಪಡುವವರು ಆಗಿರುವುದನ್ನು ಉದ್ಧರಿಸಿದ್ದಾರೆ.

ಕೆಲವರು ಇಲ್ಲಿ ತನ್ನ ವಿರುದ್ಧ ಅಪಪ್ರಚಾರಕ್ಕೆ ಯತ್ನಿಸುತ್ತಿದ್ದಾರೆ. ತಾನು ಕೆಲವು ವಿಷಯಗಳ ವಿರೋಧಿ ಎಂದು ಅವರಿಗೆ ಬಿಂಬಿಸಬೇಕಾಗಿದೆ. ಮಹಾತ್ಮಾ ಗಾಂಧಿ, ಡಾ.ಅಂಬೇಡ್ಕರ್, ಪೆರಿಯಾರ್ ಮತ್ತು ಇವಿ ರಾಮ ಸ್ವಾಮಿ ಸಹಿತ ಗಣ್ಯರಿಗೆ ತನ್ನ ಮನಸ್ಸಿನಲ್ಲಿ ಸಮಾನ ಸ್ಥಾನವಿದೆ. ಆದರೆ ನನ್ನನ್ನು ಕೆಲವರು ಹಿಂದೂ ವಿರೋಧಿ ಎನ್ನುತ್ತಿದ್ದಾರೆ. ಅದು ಸರಿಯಲ್ಲ.

ಆದರೆ ಕಮಲ್ ಹಾಸನ್‍ರು 2013ರಲ್ಲಿ ಚಿತ್ರಿಸಿದ ವಿಶ್ವ ರೂಪಮ್ ಸಿನೆಮಾದ ರೀತಿಗೆ ಆ ಸಮುದಾಯ ಕುಪಿತವಾಗಿತ್ತು. ಕಳೆದ ವರ್ಷ ತನ್ನ ಜನ್ಮ ದಿನದಂದು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ನಡೆಸುವುದು ಉಚಿತ ಅಲ್ಲ ಎಂದು ಹೇಳಿದ್ದರು. ಆದರೆ ನನ್ನ ಹೇಳಿಕೆ ಹಿಂದೂಗಳಿಗೆ ನೋವು ಉಂಟು ಮಾಡುವ ಉದ್ದೇಶವನ್ನು ಹೊಂದಿದ್ದಾಗಿರಲಿಲ್ಲ ಎಂದು ಕಮಲ್ ಹಾಸನ್ ಹೇಳಿದ್ಧಾರೆ.

Leave a Reply