ಫೇಸ್‌ಬುಕ್‌ ಮುಖಾಂತರ ಮಾಜಿ ಡಿವೈಸ್ಪಿ ಅನುಪಮಾ ಶೆಣೈ ಅವರ ಪೊಲಿಟಿಕಲ್ ಗೇಮ್ ಬಾರಿ ಜೋರಾಗಿ ಸಾಗುತ್ತಿದೆ.‌ ಹಗಲು ರಾತ್ರಿ ಅನುಪಮಾ ಶೆಣೈ ಅವರು ತಮ್ಮ ಫೇಸ್‍ಬುಕ್ ಗೋಡೆಯ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪ್ರಧಾನಿ ಮೋದಿಜಿಯನ್ನು ವ್ಯಂಗ್ಯ ಮಾಡುತ್ತಲೇ ಹೋಗುತ್ತಿದ್ದಾರೆ.

ಇಂದು ಬೆಳಗ್ಗೆ ಹಾಕಿದ ಪೋಸ್ಟಿನಲ್ಲಿ “ಮೋದಿ ಹೆಂಡತಿಯನ್ನು ಬಿಟ್ರು, ನಾನು ಪೋಲಿಸ್ ಕೆಲ್ಸ ಬಿಟ್ಟಿದ್ದೇನೆ! ಹಾಗಾದರೆ ಹೆಂಡತಿ ಅಂದರೆ ಪೋಲಿಸ?” ಎಂದು ಮೋದಿಯವರನ್ನು ತಮಾಷೆ ಮಾಡಿದ್ದಾರೆ. ‌ಇದರಿಂದ ಆಕ್ರೋಶಕ್ಕೆ ಒಳಗಾದ ಮೋದಿ ಬೆಂಬಲಿಗರು ತೀವ್ರ ಅಸಮಾಧಾನದ ಕಾಮೆಂಟ್ ಮಾಡತೊಡಗಿದ್ದಾರೆ.

ಮೊನ್ನೆಯವರೆಗೂ ಮೋದಿ ಪರವಾಗಿದ್ದ ಅನುಪಮಾ ಶೆಣೈ ಇದ್ದಕ್ಕಿದ್ದಂತೆ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಮಾಡುವುದು ಜನರಲ್ಲಿ ಹಲವಾರು ಗೊಂದಲವನ್ನು ಉಂಟು ಮಾಡಿದೆ.‌ ಕೆಲವರು ಅನುಪಮಾ ಶೆಣೈ ಅವರು ಡಬಲ್ ಗೇಮ್ ಆಡುತ್ತಿದ್ದಾರೆ. ‌ಜಾತ್ಯತೀತರ ಮತವನ್ನು ವಿಭಜಿಸುವ ಸಲುವಾಗಿ ಈ ಆಟವನ್ನು ಆಡುತ್ತಿರುವ ಶಂಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಿನಲ್ಲಿ ಅವರಿಟ್ಟಿರುವ ಈ ಹೆಜ್ಜೆ ಯಾವ ರೀತಿ ಪೊಲಿಟಿಕಲ್ ಗೇಮ್ ಬದಲಾಯಿಸುತ್ತೆ ಎಂದು ಮುಂಬರುವ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Leave a Reply