ಉತ್ತರ ಪ್ರದೇಶ: ಪಾಸ್‍ಪೋರ್ಟ್ ಕಚೇರಿಯಲ್ಲಿ ಮದ್ರಸಾ ವಿದ್ಯಾರ್ಥಿಯನ್ನು ನೀನು ಭಯೋತ್ಪಾದಕ ಅಲ್ಲ ತಾನೆ? ಎಂದು ಪ್ರಶ್ನಿಸಿರುವುದಾಗಿ ದರ್ಗಾ ಅಲಾ ಹಝ್ರತ್‍ನ ಮುಫ್ತಿ ಮುಹಮ್ಮದ ಸಲೀಮ್ ನೂರಿ ಪ್ರಧಾನಿಗೆ ಪತ್ರ ಬರೆದು ದೂರಿ ಕೊಂಡಿರುವುದಾಗಿ ವರದಿಯಾಗಿದೆ.

ಮದ್ರಸಾ ಬೋರ್ಡಿನ ಮಾರ್ಕ್ ಲೀಸ್ಟ್‍ನ್ನು ವಿದ್ಯಾರ್ಥಿ ಪಾಸ್ ಪೋರ್ಟು ಕಚೇರಿ ಸಿಬ್ಬಂದಿಗೆ ತೋರಿಸಿದ್ದಾನೆ. ಆಗ ಅಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಗಳು ಹೀಗೆ ಅವಮಾನಿಸಿದ್ದಾರೆ.

ಪಾಸ್ ಪೋರ್ಟ್ ವೆಬ್‍ಸೈಟ್‍ನಲ್ಲಿ ತೋರಿಸಿದ ದಾಖಲೆಗಳನ್ನು ಮಾತ್ರವಲ್ಲ, ಅನಗತ್ಯ ದಾಖಲೆಗಳನ್ನು ಕೂಡಾ ಪಾಸ್‍ಪೋರ್ಟ್ ಕಚೇರಿಯಲ್ಲಿ ಕೇಳುತ್ತಾರೆ ಎಂದು ಮುಫ್ತಿ ಸಲೀಮ್ ನೂರಿ ಹೇಳಿದರು. 1995ರಲ್ಲಿ ಉತ್ತರ ಪ್ರದೇಶ ಸರಕಾರ ಆಲಿಮ್ ಪರೀಕ್ಷೆಯನ್ನು ಇಂಟರ್ ಮೀಡಿಯಟ್ ಮತ್ತು ಮೌಲಿ, ಮುಂಶಿ ಪರೀಕ್ಷೆಯನ್ನು ಹೈಸ್ಕೂಲ್ ಪರೀಕ್ಷೆಗೆ ಸಮಾನ ಎಂದು ಘೋಷಿಸಿತ್ತು.

ಇಂತಹ ಮಾತೆಲ್ಲ ಆಡಿ ಮಾರ್ಕ್ ಲೀಸ್ಟನ್ನು ನೋಡಿ ನಕಲಿ ಎಂದು ಮದ್ರಸಾ ವಿದ್ಯಾರ್ಥಿಗಳ ಮುಖಕ್ಕೆ ಪಾಸ್ ಪೋರ್ಟ್ ಕಚೇರಿಯಲ್ಲಿ ಎಸೆಯುತ್ತಾರೆ. ಕೆಲವು ವಿದ್ಯಾರ್ಥಿಗಳಿಂದ ಟಿಸಿ ಪ್ರವೇಶ ಪತ್ರ ಇತ್ಯಾದಿ ದಾಖಲೆಗಳನ್ನು ಕೇಳುತ್ತಾರೆ. ಇದು ಪಾಸ್‍ಪೋರ್ಟ್ ವೆಬ್ ಸೈಟ್‍ನಲ್ಲಿ ಇಲ್ಲದ ದಾಖಲೆಗಳಾಗಿವೆ. ಆದರೂ ಮದ್ರಸಾ ವಿದ್ಯಾರ್ಥಿಗಳನ್ನು ಹೀಗೆ ನಡೆಸಿಕೊಳ್ಳಲಾಗುತ್ತಿದೆ.

Leave a Reply