2018 ರ ಬಜೆಟ್ ಭಾಷಣವನ್ನು ಇಂದು(ಗುರುವಾರ,1,2018) ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರು ಮಂಡಿಸಿದ್ದು ಬಜೆಟ್ ಭಾಷಣದಲ್ಲಿ
ಸರಕಾರ, ಕೋಟಿ,ಮತ್ತು ಭಾರತ ಎಂಬ ಪದಗಳೇ ಮೇಲುಗೈ ಸಾಧಿಸಿವೆ.

ಸರಕಾರ(Government) ಎಂಬ ಪದವನ್ನು 122 ಬಾರಿ,
ಕೋಟಿ( Crore) ಎಂಬ ಪದವನ್ನು 111 ಬಾರಿ ಹಾಗೂ ಭಾರತ(India) ಎಂಬ ಪದವನ್ನು 96 ಬಾರಿ ಬಳಕೆ ಮಾಡಿದ್ದಾರೆ.

ಒಟ್ಟು 18,604 ಪದಗಳನ್ನೊಳಗೊಂಡ ಬಜೆಟ್ ನ್ನು ಅರುಣ್ ಜೇಟ್ಲಿಯವರು ಮಂಡಿಸಿದ್ದು ದ್ವಿತೀಯ ದೀರ್ಘ ಬಜೆಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 1991 ರಲ್ಲಿ ಮನಮೋಹನ್ ಸಿಂಗ್ ರವರು ಮಂಡಿಸಿದ್ದ ಬಜೆಟ್ 18,650 ಪದಗಳನ್ನು ಹೊಂದಿದ್ದು ದೊಡ್ಡ ಬಜೆಟ್ ಮಂಡನೆಯ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

ಅದೇ ರೀತಿ 1977 ರಲ್ಲಿ ಹೆಚ್ ಎಮ್ ಪಟೇಲ್ ರವರು 860 ಪದಗಳನ್ನೊಳಗೊಂಡ ಬಜೆಟ್ ಮಂಡಿಸಿದ್ದು ಅತೀ ಚಿಕ್ಕ ಬಜೆಟ್ ಭಾಷಣವಾಗಿದೆ.

Leave a Reply